Submission 3781

ದುಂಡು ಚಂದ್ರ

Submitted By: SHIVARAJ BELLERI

----------------------------------

ಬಂದನೋ ಚಂದ್ರ ಬಂದನೋ.. ದುಂಡು ದುಂಡಾಗಿ ಕಂಡನೋ. ಬಯಲಿಗೆ ಬಂದರೆ ಬಯಸದೆ ಸೆಳೆಯುವ. ಸೂರ್ಯಗೆ ಸವಾಲು ಒಡ್ಡುತ ಬೆಳಗುವ. ಭುವಿಯಲೀ ಕತ್ತಲೆ ಮರೆಮಾಚಿದವನಿವ. ಕೊಬ್ಬಿದ ಹರೆಯದ ಯುವಕ ನಂತಿರುವ.. ತಿಂಗಳ ರೂಪದಿ ಹೂಗಳ ಸುರಿಯುತ. ಎಲ್ಲರ ಗಮನವ ಒಮ್ಮೆಲೇ ಸೆಳೆಯುತ. ಇರುಳಿನ ತಿರುಳಿಗೆ ಧೈರ್ಯವ ತುಂಬುತ. ಸಾಗುವ ನನ್ನೋಡನೆ ದೂರದ ಸ್ನೇಹಿತ ಬಂದನೋ ಚಂದ್ರ ಬಂದನೋ. ದುಂಡು ದುಂಡಾಗಿ ಕಂಡನೋ.

----------------------------------

Reg ID: BF25-5847

Please Note - You can vote only Once. If you have already voted - the voting will be disabled automatically by the system.

4
Votes
135
Views
8 Months
Since posted

VOTING Closed on Nov 30, 2025!

Scroll to Top