Submission 3779

ನೀಲ ನೀಲಿ ನೀಲಿಯೇ..

Submitted By: Ganesh Vernekar

----------------------------------

ಅಲ್ಲಿ ಎಲ್ಲವೂ ನೀಲಿಯೇ, ಅಲ್ಲಿ ಎಲ್ಲವೂ ನೀಲವೇ ಅಲ್ಲಿಯ ಎಲ್ಲ ಮಜಲುಗಳಲ್ಲಿ, ಎಲ್ಲ ಕವಲುಗಳಲ್ಲಿ ಎಲ್ಲ ಹಾದಿಗಳಲ್ಲಿ, ಎಲ್ಲ ಭಾವಗಳಲ್ಲಿ ಇರುವುದು ನೀಲ ನೀಲಿ ನೀಲಿಯೇ.. ಅಲ್ಲಿ ಇರುವುದು ಅನಂತವು ಅಲ್ಲೇ ಇರುವುದು ದಿಗಂತವು ಆ ದಿಗಂತಕ್ಕೆ ಕೊನೆ ಇಲ್ಲ ಅದು ಅಮೂರ್ತ ಅನನ್ಯ ಅಮೋಘ ಅವರ್ಣನೀಯ ಅಲ್ಲಿ ದೇಹದ, ದೇವರ, ಧರ್ಮದ ಮಾತಿಲ್ಲ ಅಲ್ಲಿ ಸಮಾಜದ, ಸಹವಾಸದ, ಸಂಗತಿಗಳ ಸಾರವಿಲ್ಲ ಹುಟ್ಟು-ಸಾವು, ಪಾಪ-ಪುಣ್ಯ, ಉಳಿತು-ಕೆಡುಕಿನ ಭೇದವಿಲ್ಲ ಪರಿಧಿಯನ್ನು ಮೀರಿದ ಅಪರಿಮಿತ ಜಗವದು ಅಲ್ಲಿ ಇರುವುದು ಕೇವಲ ಕೊನೆಯಿಲ್ಲದ ಜಲರಾಶಿ ಕೊನೆಯಿಲ್ಲದ ಭಾನು, ಕೊನೆಯಿಲ್ಲದ ನೀಲಿ ಅಲ್ಲಿರುವುದು ನಾನು ಮತ್ತು ಭವಿಸಿದರು ವ್ಯಕ್ತಪಡಿಸಲಾಗದ ಅವ್ಯಕ್ತ ಭಾವಗಳು ಅಷ್ಟೇ..!

----------------------------------

Reg ID: BF25-5846

Please Note - You can vote only Once. If you have already voted - the voting will be disabled automatically by the system.

2
Votes
193
Views
6 Months
Since posted

VOTING Closed on Nov 30, 2025!

Scroll to Top