“ವಿಶ್ವಪ್ರೀತಿಯ ದಾರಿ“
Submitted By: Prahlad Athani
----------------------------------
ಬೀಸುವ ಗಾಳಿ ಜಾತಿ ಕೇಳಿಲ್ಲ ಯಾರಿಗ, ಹರಿಯುವ ನೀರ ಮುಟ್ಟಬ್ಯಾಡ ಅಂದಿಲ್ಲ ನಿಮಗ..! ಜಾತಿ ಗದ್ದಲದಾಗ ನೀತಿ ಮರೆತಿರೋ, ಜಾತಿ ಮುಖ್ಯ ಅಲ್ಲ ನೀತಿ ಮುಖ್ಯ ತಿಳಿಯೋ ಮನುಜ ಮಾರ್ಗ..! ಹೊತ್ತ ಭೂಮಿ ಕುಲ ಕೇಳಿಲ್ಲ ನಿಮಗ, ಹುಟ್ಟಿದ ಸೂರ್ಯ ಕತ್ತಲು ನೀಡಿಲ್ಲ ಯಾರಿಗ..! ಹರಿಯುವ ರಕ್ತ ಒಂದೇ ಐತಿ ಮಯ್ಯಾಗ, ಇದನ್ನ ತಿಳಿದು ನಡಿ ಜೀವನಾದೀತು ಸಾರ್ಥಕ..! ನೆಲೆಯ ಬಣ್ಣ ಒಂದೇ ಐತಿ ಕಣ್ಣಾಗ, ಭಗವಂತನ ಪ್ರೀತಿ ಬೆರಿಲ್ಲ ಯಾರಿಗ..! ಅಂತರಾತ್ಮವ ಅರಿತು ನಡಿ ಮುಂದಲಗ, ಉತ್ತೇಜನ ನೆರೆಯುಹುದು ನಿನ್ನ ಜೀವನದಾಗ..! ತಾಯಿಯ ಪ್ರೀತಿ ಒಂದೇ ಐತಿ ಎಲ್ಲರಿಗ, ನೆನಪಿಟ್ಟುಕೋ ಒಂದಿನ ಹೋಗುದೈತಿ ಮಣ್ಣಾಗ..! ಭೋದನೆ ಬೇಕಿಲ್ಲ ಇಷ್ಟೆಲ್ಲ ಅರಿತವಂಗ, ವಿಶ್ವಪ್ರೀತಿ ಸಾಧಿಸಿಯಾನು ಇವತ್ತಿನ ಜಗದಾಗ..!
----------------------------------
Reg ID: BF25-5848
Please Note - You can vote only Once. If you have already voted - the voting will be disabled automatically by the system.