Submission 3516

ಸಂಗಾತಿ

Submitted By: Mahaling Kallappa Hanchinal

----------------------------------

ಬಾ ಸಂಗಾತಿ ನನ್ನಗೂಡಲು ಜೊತೆಯಾಗಿ ನೀ ನಡೆಯಲು ನನ್ನ ಬಾಳ ದೋಣಿಯಲಿ ಸಂಗಾತಿ ನೀ ಮಡದಿಯಾಗಲು ಯಾವ ಜನ್ಮದ ಋಣವೋ ಸಂಗಾತಿ ನೀ ಮಡದಿಯಾಗಲು ಏನಿದು ಎಂಥ ಕಳವಳವು ನೀ ನಿಲ್ಲದಾ ಗಳಿಗೆ ಬೇಸರದಾ ವಿಷ ಮಳಿಗೆ ಭಲೇ ಸಂಗಾತಿ ಕಣ್ಣಾ ಮುಚ್ಚಾಲೆ ಆಡುತಾ ನೀನೆಲ್ಲಿ ಮರೆಯಾಗಿರುವೆ ? ನಾ ಅರಸುತಿರುವೇ ನೀನೆಲ್ಲಿ ಮರೆಯಾಗಿರುವೇ ? ನಾ ತಲೆದೂಗಿ ನಿಲ್ಲುತ್ತಾ ನಿನ್ನ ದಾರಿಯಾ ಕಾಯುತ್ತಾ ಬೇಸತ್ತಿದೆ ಈ ಜೀವ ನೀನಿಲ್ಲದೆ ನೀನು ಬೇಕೇನ್ನುವ ಹೂವು ಜೇಬಿನಲ್ಲಿ ಕುಂತಿದೆ ಈ ಅಲೆವ ಮನಕೆ ನಿನ್ನ ನೆನಪು ಅತಿಯಾಗಿದೆ ನಗುವಾ ನಿನ್ನ ಮೊಗವ ತೋರೆ ಬಳೆಯ ಸದ್ದಿನಲಿ ಹೃದಯ ಕದಿಯಲು ಬಾರೆ ಈ ಮನವಾ ಕದಿಯಲು ಬಾರೆ ಈ ಮನಕೆ ಆಸರೆಯಾಗುಲು ಬಾರೆ ಸಂಗಾತಿ ನೀನಾಗು ನನ್ನ ಬಾಳ್ವೆಗೆ ನನ್ನ ಬಾಳ ಬೆಳಗಲು ಬಾರೆ ಭಲೇ ಸಂಗಾತಿ ಕಣ್ಣಾ ಮುಚ್ಚಾಲೆ ಆಡುತಾ ನೀನೆಲ್ಲಿ ಮರೆಯಾಗಿರುವೆ ? ನಾ ಅರಸುತಿರುವೇ ನೀನೆಲ್ಲಿ ಮರೆಯಾಗಿರುವೇ ? ಬಾ ಸಂಗಾತಿ ನನ್ನಗೂಡಲು ಸಂಗಾತಿ ನೀ ಮಡದಿಯಾಗಲು

----------------------------------

Reg ID: BF25-5755

Please Note - You can vote only Once. If you have already voted - the voting will be disabled automatically by the system.

41
Votes
284
Views
6 Months
Since posted

VOTING Closed on Nov 30, 2025!

Scroll to Top