ವನಸುಮ
Submitted By: SHIVASHANKAR PRASAD
----------------------------------
ಯಾರಿಗಾಗಿ ಅರಳಿರುವೆ,ಯಾರಿಗಾಗಿ ಸೂಸಿರುವೆ ಯಾರೂ ತುಳಿಯದ ಹಾದಿಯಲಿ ,ಬೆಳೆದು ನಿಂತ ವನಸುಮವೇ. ಯಾವ ದೇವರಿಗೂ ಮುಡುಪಾಗಿರದೇ,ಯಾವ ಸುಂದರಿಯ ಮುಡಿಗೇರದೆಯೇ ನಿನ್ನಷ್ಟಕ್ಕೆ ನೀನೆ ಇರುವೆ ,ಒಬ್ಬಳೇ ನಲಿದಾಡುತಿಹೆ. ಹಮ್ಮು ಬಿಮ್ಮು ನಿನಗಿಲ್ಲ,ಮೌನದಲಿ ನಗುತಿಹೆಯಲ್ಲ ಯಾರನ್ನು ಮೆಚ್ಚಿಸದೇ,ನಿನಗಾಗಿ ಬದುಕಿರುವೆ. ನಾಳೆ ಚಿಂತೆ ನಿನಗಿಲ್ಲ,ಧನ ಕನಕ ಬೇಕಿಲ್ಲ ಮೂರೇ ಮೂರು ದಿನಗಳಲಿ,ಸಾರ್ಥಕತೆಯ ಮೆರೆದಿರುವೆ. ನಿನ್ನಂತೆ ನಾ ಯಾಕಿಲ್ಲ?,ಯಾರಿಗಾಗಿ ಬದುಕೆಲ್ಲ? ಸ್ವಾರ್ಥವೆಲ್ಲ ತೊರೆದು ನಾನು,ನಿನ್ನಂತೆ ಇರಬೇಕಲ್ಲ!!
----------------------------------
Reg ID: BF25-5756
Please Note - You can vote only Once. If you have already voted - the voting will be disabled automatically by the system.