Submission 3446

ಅಂತರಂಗದ ಪ್ರಶ್ನೆಗಳು

Submitted By: Yallavva Nayak

----------------------------------

ಹೇಗೆ ಬಾಳಲಿ ? ಹೇಗೆ ಬದುಕಲಿ ? ನಾ ಹೇಗೆ ಬದುಕಿದರೂ ಹೇಗೆ ಬಾಳಿದರು ನೀ ಹೀಗೇಕೆ ಎಂದು ಪ್ರಶ್ನಿಸುವ ಈ ಜನರ ಮಧ್ಯೆ. ದಿನವೊಂದು ಪಾತ್ರದೊಡನೆ ದಿನಕ್ಕೊಂದು ಪಾತ್ರವಾಗಿ ಬದುಕಿ ನನ್ನನ್ನೇ ನಾನು ಮರೆತರು ಯಾರು ಸಹ ನಾನು ಕೇವಲ ಪಾತ್ರವಲ್ಲ. ಒಂದು ಭಾವನೆ ಎಂದು ಅರಿಯದೆ ಹೀಗೇಕೆ ಎಂದು ಪ್ರಶ್ನಿಸುವ ಈ ಜನರ ಮಧ್ಯೆ ಹೇಗೆ ಬಾಳಲಿ ? ಹೇಗೆ ಬದುಕಲಿ ? ನಾ ಹೇಗೆ ಬದುಕಿದರು ಹೀಯಾಳಿಸುವ ಈ ಜನರ ಮಧ್ಯೆ ನನಗಾಗಿ ನಾನು ಬದುಕುವುದನ್ನು ಕಲಿಯಬೇಕಿದೆ. ಕೇವಲ ಹೆಸರಿಗಾಗಿ ಇರುವ ಈ ಸ್ವಾತಂತ್ರ್ಯವನ್ನು ನೈಜವಾಗಿ ಪಡೆಯಬೇಕಿದೆ. ಆದರೆ ನನಗೆ ತಿಳಿಯದಾಗಿದೆ ಈ ಮನದಾಳದ ನೋವನ್ನು ಯಾರಿಗೆ ಹೇಳಬೇಕಿದೆ ?

----------------------------------

Reg ID: BF25-5720

Please Note - You can vote only Once. If you have already voted - the voting will be disabled automatically by the system.

156
Votes
1,042
Views
11 Months
Since posted

VOTING Closed on Nov 30, 2025!

Scroll to Top