ಮನ
Submitted By: Pavan Deshpande
----------------------------------
ಮುದ್ದಾದ ಮನವು ಪೆದ್ದಾದ ಮನವು ಮಂಕಾದ ಮನವು, ದೊಂಕಾದ ಮನವು ತಿದ್ದಿ ತೀಡಿದಾಗ ಮತ್ತೆ ಕಲುಕಾಗುವ ಮನವು ಹಿರಿದಾದ ಮನವು, ಬರಿದಾದ ಮನವು ಕಲ್ಮಶಗಳಿಗೆ ಸಿಲುಕಿ ತೊಳಲಾಡುವ ಮನವು, ಆರೋಹಣಕ್ಕೇರಿ ಸಂಭ್ರಮಿಸುವ ಮನವು ಅವರೋಹಣಕ್ಕಿಳಿದು ರೋಧಿಸುವ ಮನವು ಅಣುಕಿಸುವ ಮನವು ಹಂಬಲಿಸುವ ಮನವು ಹಲ್ಲುಮಸೆದು ಮತ್ತೆ ತಲ್ಲಣಿಸುವ ಮನವು ಎತ್ತಲೋ ಓಡುವ ಮನವು ಕತ್ತಲೆಡೆಗೆ ಹಿಂಜರಿಪ ಮನವು ಕೊಂಚ ಬಳುಕಿದಾಗ ಮತ್ತೆ ಹೆಂಕರಿಸುವ ಮನವು ವಿವರಣೆಗಳ ಬಾಣಕೆ ಬಳಲುವ ಮನವು ದ್ವಂದ್ವ ಗಳ ಬಲೆಗೆ ಸಿಲುಕಿ ಬೆಂದ ಹಸಿ ಮನವು ಕನವರಿಕೆಯಲ್ಲಿ ಕನಸು ಕಾಣುವ ಮನವು ಮನವರಿಕೆ ಮಾಡಿ ತಟಸ್ಥವಾದ ಮನವು
----------------------------------
Reg ID: BF25-5674
Please Note - You can vote only Once. If you have already voted - the voting will be disabled automatically by the system.