Submission 3070

ತೀರಿಸಲಾಗದ ತಾಯಿಯ ಋಣ

Submitted By: MADHU B.R.

----------------------------------

ಹೇಗೆ ತೀರಿಸಲೇ ತಾಯಿ ನಿನ್ನೀ ಋಣವ ಒಂದೇ ಜನುಮದಲಿ ಈ ನನ್ನ ಜೀವನವನೇ ಮುಡಿಪಾಗಿಡುವೆನು ನಿನ್ನ ಸೇವೆಯಲಿ ನವಮಾಸ ನಿನ್ನೊಡಲಲಿ ಹೊತ್ತು ಜೋಪಾನದಿ ಕಾಯ್ದೆಯೆನ್ನ ಧರೆಗಿಳಿದು ಕಣ್ತೆರೆಯಲು ಮುತ್ತನಿಟ್ಟಿ ತಬ್ಬಿ ಮುದ್ದಾಡಿದೆಯೆನ್ನ ದಿನಗಳುರುಳಿದಂತೆ ಪಾಲಿಸಿ ಪೋಷಿಸಿ ಸಾಕಿ ಸಲಹಿದೆಯೆನ್ನ ಕಿಂಚಿತ್ತು ಕಷ್ಟ ತಿಳಿಯದಂತೆ ಎಲ್ಲವ ಸಹಿಸುತ ಬೆಳೆಸಿದೆಯೆನ್ನ ನೀ ತೋರಿದ ಪ್ರೀತಿಗೆ ಪಾರವೇ ಇಲ್ಲ, ವಾತ್ಸಲ್ಯಕೆ ವಾಯಿದೆಯಿಲ್ಲ ನೀ ಕಲಿಸಿದ ಪಾಠಕೆ ಪಠ್ಯವಿಲ್ಲ, ನೀತಿ ನಿಯಮಕೆ ಸರಿಸಾಟಿಯಿಲ್ಲ ನೀ ಕೊಟ್ಟ ಜನುಮ ಭಿಕ್ಷೆಗೆ ಜಗದಾವ ಸಿರಿಯು ಸರಿದೂಗುವುದಿಲ್ಲ ನೆನೆಯುವೆ ಕೊನೆಯುಸಿರಿರೋ ತನಕ, ನೀನಿಲ್ಲದೆ ನಾನಿರುತಿರಲಿಲ್ಲ

----------------------------------

Reg ID: BF25-5552

Please Note - You can vote only Once. If you have already voted - the voting will be disabled automatically by the system.

2
Votes
141
Views
7 Months
Since posted

VOTING Closed on Nov 30, 2025!

Scroll to Top