ಅಶ್ವತ್ಥಾಮ
Submitted By: Shreya V Upadhyaya
----------------------------------
ಕೇಳುವಿರಾ ಈ ಚಿರಂಜೀವಿಯ ಕಥೆಯ, ನಿಯತಿಯ ವಿಡಂಬನೆಯ ಪ್ರಚಂಡ ಪಾತ್ರಧಾರಿಯ ಕಥೆಯ ಗುರು ದ್ರೋಣರ ಪುತ್ರ ನಾನು.. ಮಸ್ತಕದಲ್ಲಿ ಸ್ವರ್ಣ ಮಣಿಯ ದಿವ್ಯ ಸ್ವರೂಪ, ಸ್ವಯಂ ಕೈಲಾಸಧೀಶನ ಅಂಶ ನಾನು, ಉಪಪಾಂಡವರ ಸಾವಿನ ಸಾಕ್ಷಿ ನಾನಾದೆ.. ನನಗೆಲ್ಲಿಹುದು ಪರ್ಯಾಯವಾಚಿ, ಕ್ಷೀರದ ಒಂದೊಂದು ಹನಿಯ ಆಕಾಂಕ್ಷಿ.. ಇತಿಹಾಸದ ಪುಟವೊಂದು ಕಾದಿರಲು ನನಗಾಗಿ, ಉತ್ತರೆಯ ಗರ್ಭಕ್ಕೆ ಬ್ರಹ್ಮಾಸ್ತ್ರವ ಬಿಟ್ಟ ಪಾಪಿಯೂ ನಾನಾದೆ.. ಶೇಷಶಯನನ ಶಾಪಕ್ಕೆ ಗುರಿಯಾದೆ. ಮನು ಕುಲವೇ ಮರೆತ ಯೋಧ ನಾನಾದೆ.. ಕತ್ತಲ ಸೆರೆಯಲ್ಲಿ ಮರೆಯಾದ, ಅಶ್ವತ್ಥಾಮ ನಾನಾದೆ!!
----------------------------------
Reg ID: BF25-5553
Please Note - You can vote only Once. If you have already voted - the voting will be disabled automatically by the system.