ಅಂದಗಾತಿ
Submitted By: Basavaraj jadhav
----------------------------------
ಕಿವಿಗೆ ಧರಿಸಿದ ಓಲೆ ಕೂಡಾ ಅವಳ ಕನಸು ಕಾಣುತಿತ್ತು, ಜೀವನ ಪೂರ್ತಿ ಇವಳ ಕಿವಿಯಲ್ಲೇ ನೇತಾಡಬೇಕೆಂದು. ಅವಳ ಮೂಗ ತುದಿಯಲ್ಲಿ ಮೂಗುತಿಯು ಮೆರೆಯುತ್ತಿತ್ತು, ಮೂಗ ಮೇಲೆ ಜಾಗ ಕೊಟ್ಟವಳು ಅವಳ ಮನಸಲ್ಲಿಯೂ ಕೊಡಬಹುದೆಂದು. ಹಚ್ಚಿದ ಕಡು ಕಪ್ಪು ಕಾಡಿಗೆಯು ಕವಡೆ ಕೇಳುತ್ತಿತ್ತು, ತನ್ನ ಕಡೆಗಾಲವು ಕೂಡಾ ಇವಳ ಕಣ್ಣಂಚಲ್ಲೇ ಕೊನೆಯಾಗಬೇಕೆಂದು. ಅವಳಿತ್ತ ಬಿಂದಿಯು ಭಗವಂತನಲ್ಲಿ ಬೇಡಿಕೆ ಇಡುತಿತ್ತು, ಯಾವಾಗಲೂ ಇವಳ ಒಲವ ಬಂಧನದಲೇ ಬಂಧಿಯಾಗಿರಬೇಕೆಂದು.
----------------------------------
Reg ID: BF25-5541
Please Note - You can vote only Once. If you have already voted - the voting will be disabled automatically by the system.