ನನ್ನರಸಿ
Submitted By: Vasantha k r
----------------------------------
ಕರಿ ಮೋಡದೊಡವೆ ನಿನಗೇಕೆ ನನ್ನರಸಿ ತಂಪಾಗಿ ತುಂತುರು ಧರೆಗಿಳಿಸಿ ನಲ್ಲ ನೊಲುಮೆಯನೊಮ್ಮೆ ಸಿಂಗರಿಸಿ ಬಾ ನನ್ನ ಮನದರಸಿ ಆ ನಿನ್ನ ಮೊಗದ ನಗೆಗಡಲಿನಲಿ ನೆನಪುಗಳ ದೋಣಿಯನ್ನಿರಿಸಿ ಪಯಣಿಸುವ ಪಯಣಿಗ ನಾನು ಅಲೆಯಬ್ಬಿಸದಿರು ಬರುವೆ ನಾ ನಿನ್ನರಸಿ. ಜೊತೆಯಾದ ಹೆಜ್ಜೆ ಸಪ್ಪಳವಿಲ್ಲ ಗೆಜ್ಜೆಯ ಧನಿಯಿಲ್ಲ ಬಳೆಯ ಸದ್ದಿಲ್ಲ ಮಾತು ಮರೆತು ಮೌನ ಬೆರೆತು ಮನಕೆ ಮಂಜು ಕವಿದು ಇರುಳತಂದಿತು ಬರುವೆಯ ನೀ ನನ್ನರಸಿ ನಿನ್ನ ಸಿಡುಕ ಸಂಹರಿಸಿ ಕೋಮಲಾoಗಿ ಕನಕಾಂಗಿ ನನ್ನ ಕಮಲಾಂಗಿ ಬರುವೆಯಾ ನೀ ನನಗೆ ಜೊತೆಯಾಗಿ
----------------------------------
Reg ID: BF25-5441
Please Note - You can vote only Once. If you have already voted - the voting will be disabled automatically by the system.