ಬಿಳಿ ಹಾಳೆ
Submitted By: Jyoti Korishetti
----------------------------------
ಬಿಳಿ ಹಾಳೆಯೇ ನೀನು ಎಷ್ಟೊಂದು ಹಗುರ ನಿನ್ನಲ್ಲಿ ಪದಗಳ ಗೀಚುತ ನಾನೂ ಹಗುರ ನನ್ನ ಎಲ್ಲ ಭಾವನೆಗಳ ನೀ ಸ್ವೀಕರಿಸುವೆ ಈ ಪಯಣದ ಹಾದಿಯಲ್ಲಿ ನಿನ್ನನ್ನೇ ಬೇಡಿರುವೆ ನೀ ನಿರ್ಜೀವಿಯಾದರೂ ನನ್ನ ಶಬ್ಧಗಳಿಗೆ ಜೀವವಾಗಿರುವೆ ನನ್ನ ವಿಚಾರ ವ್ಯಕ್ತಪಡಿಸಲು ನನಗೆ ವೇದಿಕೆಯಾಗಿರುವೆ ನಮ್ಮಿಬ್ಬರ ಈ ಸಂಬಂಧ ಎಂದೆಂದೂ ಶೀತಲವು ಎನ್ನ ಸ್ವರಸಂಪುಟದ ಸಾಹಿತ್ಯಕ್ಕೆ ನೀ ಸಂಗಾತಿಯು
----------------------------------
Reg ID: BF25-5424
Please Note - You can vote only Once. If you have already voted - the voting will be disabled automatically by the system.