Submission 2763

ಬದುಕು

Submitted By: Geeta Sonawalkar

----------------------------------

ಬದುಕಿಬಿಡು ಸತ್ತು ಹೋಗುವ ಮುನ್ನ ನಿನ್ನಿಷ್ಟದಂತೆ ಏನೂ ನಡೆಯದಿದ್ದರೂ ನಡೆಯುತ್ತಿರುವುದನ್ನು ಇಷ್ಟಪಟ್ಟು ಬದುಕಿಬಿಡು ಹೆತ್ತ ತಾಯಿಗೆ ಹೊತ್ತ ಭೂಮಿಗೆ ಋಣಿಯಾಗಿ ನೀ ಬದುಕಿಬಿಡು ಮಿತ್ರರ ಕುಚೇಷ್ಟೆಗಳು ಅತಿಯೆನಿಸಿದರೂ ಅವರೊಡನೆ ತುಂಟತನದಿ ಬದುಕಿಬಿಡು ಮಳೆಗಾಲದಲಿ ಬಿಸಿಲ ಬಯಸದೇ, ಬೇಸಿಗೆಯಲಿ ತಂಪ ಬಯಸದೇ, ಬದುಕು ಬಂದಂತೆ ಸ್ವೀಕರಿಸಿಬಿಡು ಸಾಧಿಸಲಾಗದಿದ್ದರೆ ನಿನ್ನ ಗುರಿಯ, ರೋಧಿಸುತ್ತ ಕಳೆಯದಿರು ಸಮಯವನ್ನ ಮರಳಿಯತ್ನವ ಮಾಡುತ್ತ, ಸಂತಸದಿ ಬದುಕಿಬಿಡು ಸತ್ತು ಹೋಗುವ ಮುನ್ನ

----------------------------------

Reg ID: BF25-5423

Please Note - You can vote only Once. If you have already voted - the voting will be disabled automatically by the system.

150
Votes
841
Views
11 Months
Since posted

VOTING Closed on Nov 30, 2025!

Scroll to Top