ಪ್ರೀತಿ ಹೇಗಿರಬೇಕೆಂದರೆ.......?
Submitted By: Takshika Gurav
----------------------------------
ಪ್ರೀತಿಯಲ್ಲಿ ನೋಟ ಹೇಗಿರಬೇಕೆಂದರೆ – ಸೂರ್ಯಕಾಂತಿ ಹೂವು ಸೂರ್ಯನತ್ತ ತಿರುಗುವಂತೆ ಪ್ರೀತಿಯಲ್ಲಿ ಕೇಳುವಿಕೆ ಹೇಗಿರಬೇಕೆಂದರೆ – ಪಕ್ಷಿಗಳ ಕಲರವವನ್ನು ಮರವು ಮೌನವಾಗಿ ಆಲಿಸುವಂತೆ ಪ್ರೀತಿಯ ಸುಗಂಧ ಹೇಗಿರಬೇಕೆಂದರೆ – ಮಳೆಯಿಂದ ನೆನೆದ ಧರೆಯ ಮಧುರ ವಾಸನೆಯಂತೆ ಪ್ರೀತಿಯಲ್ಲಿ ಸ್ಥಿರತೆ ಹೇಗಿರಬೇಕೆಂದರೆ – ಸಿಡಿಲು–ಮಳೆಗೆ ಅಂಜದೆ ಬೆಟ್ಟ ನಿಂತಂತೆ ಪ್ರೀತಿಯಲ್ಲಿ ಗೆಲುವು ಹೇಗಿರಬೇಕೆಂದರೆ – ಕೋಪ ಸೋತು, ಪ್ರೀತಿ ಜಯಿಸುವಂತೆ ಪ್ರೀತಿಯಲ್ಲಿ ತ್ಯಾಗ ಹೇಗಿರಬೇಕೆಂದರೆ – ಅರಮನೆಯ ರಾಣಿ ಪಾರ್ವತಿ, ಸ್ಮಶಾನವಾಸಿ ಶಿವನನ್ನ ಆರಾಧಿಸಿದಂತೆ ಪ್ರೀತಿಯಲ್ಲಿ ತಾಳ್ಮೆ ಹೇಗಿರಬೇಕೆಂದರೆ – ಆರ್ ಸಿ ಬಿ ಕಪ್ ಗೆಲ್ಲುವವರೆಗೂ ಕಾದ ಅಭಿಮಾನಿಯಂತೆ.
----------------------------------
Reg ID: BF25-5425
Please Note - You can vote only Once. If you have already voted - the voting will be disabled automatically by the system.