ಭಾವವೆಂದರೇನು?
Submitted By: Veena Shindogi
----------------------------------
ಒಲವ ತೋರುವ ಮೌನವೇ? ಸನಿಹ ಬಯಸದ ಕಾವ್ಯವೇ? ಸೋನೆಯಲಿ ಘಮಿಸುವ ಅಂತರಂಗವೇ? ಜಗದ ನಾಟ್ಯಕೆ ಬೆರಗಾದ ಏಕಾಂತವೇ? ಒಳಿತಿನೋಚನೆಯ ಗೌಪ್ಯತೆಯೇ? 'ನಾನೆಂಬು'ದಿಲ್ಲದ ನಿಸ್ವಾರ್ಥತೆಯೇ? ಯಶಸ್ಸಿಗೆ ಹೋರಾಡುವ ಗಟ್ಟಿತನವೇ? ತಾತ್ಸಾರಕ್ಕೆ ತಾಳ್ಮೆಗೆಡದ ಸಾಹಿತ್ಯವೇ? ಕಡಲ ಶೃಂಗರಿಸುವ ಕವಿತೆಯಲೆಯೇ? ಬಿಟ್ಟು ಹೋದವರ ಕಿರುಬೆರಳ ಸ್ಪರ್ಶವೇ? ಭಾವ; ಮಿಡಿತಗಳ ಬೆಸುಗೆಯೇ? ಭಾವ; ಜೀವಗಳ ಮಿಲನವೇ?
----------------------------------
Reg ID: BF25-5372
Please Note - You can vote only Once. If you have already voted - the voting will be disabled automatically by the system.