Submission 2649

ನೆಮ್ಮದಿ ಹುಡುಕುವ ಪಯಣದಲಿ

Submitted By: Aishwarya Shindogi

----------------------------------

ನೆಮ್ಮದಿ ಹುಡುಕುವ ಪಯಣದಲಿ, ಕಳೆದುಹೋದ ನಿನ್ನೆಯ ಸೌಖ್ಯ ಕ್ಷಣಗಳನ್ನು ನೆನೆಯುತ್ತಿದ್ದೀನಿ. ನೆಮ್ಮದಿ ಹುಡುಕುವ ಪಯಣದಲಿ, ನಿಲ್ದಾಣ ಬಂದಾಗ ಮೈ-ಮರೆತು ಕೂತ ಬಗೆಗೆ ಹಪಹಪಿಸಿದೀನಿ. ನೆಮ್ಮದಿ ಹುಡುಕುವ ಪಯಣದಲಿ, ಚಕ್ರವಿಲ್ಲದ, ಇಂಧನವಿಲ್ಲದ ವಾಹನದೊಟ್ಟಿಗೆ ಚಲಿಸಿ, ಕನಸಲ್ಲೇ ಬಹುದೂರ ಕ್ರಮಿಸಿದೀನಿ ಅಂತ ಕಂಬನಿಯಾಗಿದೀನಿ. ನೆಮ್ಮದಿ ಹುಡುಕುವ ಪಯಣದಲಿ, ಅದು ದಿನಸಿ ಅಂಗಡಿಯಲ್ಲಿ ಸಿಗುವ ಸಕ್ಕರೆಯಲ್ಲ ಎಂಬುದನ್ನು ಅರಿತಿದೀನಿ.

----------------------------------

Reg ID: BF25-5371

Please Note - You can vote only Once. If you have already voted - the voting will be disabled automatically by the system.

0
Votes
110
Views
10 Months
Since posted

VOTING Closed on Nov 30, 2025!

Scroll to Top