Submission 2643

ಅಂತರಂಗದ ಹಂಬಲ

Submitted By: Netravati C C

----------------------------------

ಮಾತೊಂದು ಹೇಳಬೇಕಿದೆ ಇನಿಯ ನಿನ್ನ ಬಳಿ ನಿಂತು ಮೌನವು ನನ್ನಿಂದ ಮರೆಯಾಗಬೇಕಿದೆ ನೂರು ಮಾತುಗಳ ನುಡಿಯುತ್ತಾ ಲೋಕ ಮರೆಯ ಬೇಕಿದೆ ಕನಸಿಗೆ ಬಣ್ಣ ಬಳಿಯುವ ಆಸೆಯಲಿ ತುದಿಕಾಲಲಿ ನಿಂತು ಕಾದಿರುವೆ ಹೃದಯದ ಬಡಿತವನು ಆಲಿಸಿ ನನ್ನನ್ನೆ ನಾ ಮರೆಯಬೇಕಿದೆ ನಿನ್ನ ಬಾಹುಗಳಲಿ ಸಿಲುಕಿ ಮೌನವಾಗಿ ನಿಂತು ಕಣ್ಣುಗಳ ಮಾತುಗಳನು ಕೇಳಬೇಕಿದೆ ಇನಿಯ

----------------------------------

Reg ID: BF25-5368

Please Note - You can vote only Once. If you have already voted - the voting will be disabled automatically by the system.

3
Votes
144
Views
10 Months
Since posted

VOTING Closed on Nov 30, 2025!

Scroll to Top