ರಾಮನು ಬೇಡ ರಹಿಮನು ಬೇಡ
Submitted By: Dr. SUNIL PARIT
----------------------------------
ನಮಗೆ ಯುದ್ಧ ಬೇಡ ಕಲಹ ಬೇಡ ಪ್ರೀತಿ ಮಾತ್ರ ಇರಲಿ ನಮ್ಮ ನಡುವೆ ನಮಗೆ ದ್ವೇಷ ಬೇಡ ಅಸೂಯೆ ಬೇಡ ಇರಲಿ ರೀತಿ-ನೀತಿ ಎಲ್ಲ ಕಡೆಗೆ | ನಮಗೆ ಭಾವ ಬೇಡ ಭಕ್ತಿ ಬೇಡ ತುಂಬಿರಲಿ ಮನದಿ ಭಾವನೆ ಜಾಸ್ತಿ ಮೇಲು-ಕೀಳು ಭೇದ ಬೇಡ ಇರಲಿ ಎಲ್ಲರಲಿ ಸಹಾನುಭೂತಿ ॥ ನಮಗೆ ಜಾತಿ ಬೇಡ ಧರ್ಮ ಬೇಡ ಮನದಲಿ ತುಂಬಿರಲಿ ಆತ್ಮವಿಶ್ವಾಸ ತುಂಬಿರಲಿ ಎದೆಯ ಕೊಡದಿ ಸದ್ಭಾವ ಜಲ, ಬೇಡ ಭಾಸ | ರಾಮನು ಬೇಡ ರಹೀಮನು ಬೇಡ ಕೃಷ್ಣನು ಬೇಡ ಕ್ರಿಸ್ತನು ಬೇಡ ನಮಗೆ ಬೇಡವೇ ಬೇಡ ದಾನವತ್ವ ನಮಗೆ ಬೇಕು ಮಾತ್ರ ಮಾನವತ್ವ ।। ಮನುಜ ಮಂಜೂರಲ್ಲಿ ಪ್ರೀತಿ ಒಂದಿದ್ದರೆ ಸಾಕು । ಮನುಜ ಮನುಜರಲಿ ಹೊಂದಾಣಿಕೆ ಒಂದಿದ್ದರೆ ಸಾಕು ।।
----------------------------------
Reg ID: BF25-5367
Please Note - You can vote only Once. If you have already voted - the voting will be disabled automatically by the system.