Submission 2639

ಅಮ್ಮ

Submitted By: Vijay Barki

----------------------------------

ಅಮ್ಮ ಪುಸ್ತಕ ಎಲ್ಲಿ? ಬ್ಯಾಗ್ ಎಲ್ಲಿ?ವಸ್ತ್ರ ಎಲ್ಲಿ..! ಅವಳು ಎಲ್ಲಿದ್ದರೂ ಅಲ್ಲಿಂದ ನಿಖರವಾಗಿ ಕೂಗಿ ಹೇಳ್ವವಳು....! ಬೆಳಿಗ್ಗೆ ಏಳೋದಿಂದ ನಾವು ಮನೆಗೆ ಬರೋತನ ಕಾದಿರಿದು ಕಾಯುವಳು...! ಹೊಟ್ಟೆಯ ಹಸಿವಿನಿಂದ ಬಟ್ಟೆಯ ಶುಚಿವರೆಗೆ ರುಚಿ ತಣಿಸುವಳು...! ಮಗಳಿರಲಿ ಮಗನಿರಲಿ ಅಡಿಯಿಂದ ಮುಡಿವರೆಗೂ ಕಾಯ್ವಳು..! ನೆತ್ತಿಗೆ ಎಣ್ಣೆ ಹಾಕಿ,ಬೆನ್ನ ಉಜ್ಜಿ.. ಬೆನ್ನ ಹಿಂದೆನೇ ಆರೋಗ್ಯ ಸಾಕ್ವಳು...! ಮಾಡಿದ ಅಥವಾ ತಂದ ಸ್ವಲ್ಪತಿನಿಸು ತನಗೆನದೇ ಮಕ್ಕಳು ಬರೋವರ್ಗು ತೆಗೆದಿಡುವಳು..! ತನ್ನ ಅನಾರೋಗ್ಯದ ನೋವನ್ನು ಮಕ್ಕಳ ಆನಂದಹಿತಕ್ಕಾಗಿ ಮರೆಮಾಚುವಳೂ..! ಮಕ್ಕಳ ಮನಸ್ಸು ಮರ್ಕಟವಾದಾಗಲೂ ಮಾಣಿಕ್ಯದಂತೆ ಸಹಿಸುವಳು..! ಪತಿವ್ರತೆಯಾಗಿ ಬ್ರಹ್ಮಾಂಡದಂತೆ ನನ್ನ ಜನ್ಮ ರಕ್ಷಿಸುವಳು...! ಪ್ರತಿನಿತ್ಯ ಸಂಬಳವಿಲ್ಲದ ದುಡಿವ ಏಕೖಕ ಸ್ತೀಯಿವಳು...! ಏನೇ ಇರಲಿ ತನ್ನ ಮಕ್ಕಳ ಸಂತೋಷದ ಕನಸಿಗೆ ಅಮೂಲ್ಯ ಉಡುಗೊರೆಯಾದವಳು..! ಮಕ್ಕಳ ಮುಖದಲ್ಲಿ ತನ್ನ ಸಂಕಟ ಮರೆವಳು..! ಓ ದೇವರೇ ನೀನು ನಿರಾಕಾರಿಯಾದರೂ ಅಮ್ಮನನ್ನು ನಾನಿರೋವರೆಗೂ ಸಾಕಾರಗೊಳಿಸು.. ಅವಳ ಕೊಟ್ಟ ಜನ್ಮಕೆ ಅವಳ ಮಡಿಲಲ್ಲೇ ಆತ್ಮಮುಕ್ತಿ ನೀಡುವ ವಿಧಿ ಈ ಜನ್ಮದಲ್ಲ್ಲೇ ದೊರಕಿಸು.

----------------------------------

Reg ID: BF25-5366

Please Note - You can vote only Once. If you have already voted - the voting will be disabled automatically by the system.

8
Votes
172
Views
11 Months
Since posted

VOTING Closed on Nov 30, 2025!

Scroll to Top