ಯಾರವಳು??
Submitted By: KEERTI R BHAGOJI
----------------------------------
ಅವಳೆಂದರೆ ನೋವಲು ನಗಿಸುವ ದೇವತೆ ಕಷ್ಟದಲ್ಲಿ ಜೊತೆ ನಿಲ್ಲುವ ಸ್ನೇಹಿತೆ ಅವಳ ಮಾತುಗಳೇ ಮುದ ನೀಡುವ ಕವಿತೆ ಜೊತೆಗಿದ್ದರೆ ಸಾಕವಳು ಏನಗಿಲ್ಲ ಯಾವುದೇ ಕೊರತೆ ಅವಳೆಂದರೆ ಪದಗಳಿಗೆ ನಿಲುಕದ ಸುಂದರ ಕವಿತೆ ಅವಳೆಲ್ಲೆಡೆ ಹಂಚುವಳು ಒಲವಿನ ಒರತೆ ನಿಷ್ಕಲ್ಮಶ ಸ್ನೇಹಕೆ ಬೇಕಿರುವುದೊಂದೆ ಸ್ಥಿರತೆ ಕಾಪಾಡಿಕೊಂಡರಷ್ಟೇ ಸಾಕು ನಮ್ಮ ಸ್ನೇಹಪರತೆ ಅವಳು ಬಾನಲಿ ಮಿನುಗುವ ತಾರೆಯಂತೆ ದೂರವಿದ್ದರೂ ಮನಕೆ ಮುದ ನೀಡುವ ಒಲವಿನ ಕಂತೆ ಅವಳ ಮಧುರ ಧ್ವನಿಯದು ಜಗವನೆ ಮರೆಸುವಂತೆ ಬದುಕ ಕಳೆವಾಸೆ ನಿನ್ನೀ ಸ್ನೇಹದೊಂದಿಗೆ ತೊರೆದು ಲೋಕದ ಚಿಂತೆ.
----------------------------------
Reg ID: BF25-5365
Please Note - You can vote only Once. If you have already voted - the voting will be disabled automatically by the system.