Submission 2635

ಗಜ಼ಲ್

Submitted By: Dr. Govind Hegde

----------------------------------

ಅಂಗಳದ ಕೊನೆಯಲ್ಲಿ ಹೆಜ್ಜೆಹಾಕಿದೆ ನವಿಲು ಮನದ ಮುಂಬಾಗಿಲಲಿ ಇಣುಕಿದೆ ನವಿಲು ಬಿಸಿಲ ಬೇಗೆಯಲಿ ಎಲ್ಲಿ ಮರೆಯಾಗಿತ್ತೋ ಮುಂಗಾರಿನ ಕರೆಗೆ ಗರಿಯ ಬಿಚ್ಚಿದೆ ನವಿಲು ಮಿಲನಕ್ಕೆ ಕಾತರಿಸಿ ಕರೆದಿದೆ ಮಯೂರ ಬಣ್ಣಗಳ ಹರಡಿ ಮೋಡಿ ಮಾಡಿದೆ ನವಿಲು ಎಲ್ಲ ಭರವಸೆಗಳ ಮೊತ್ತವೇನು ಅದು ಹನಿಮಳೆಯ ಸಿಂಚನದಿ ನರ್ತಿಸಿದೆ ನವಿಲು ಇದು ಬರೀ ಬೆರಗಲ್ಲ ನೋಡು ‘ಜಂಗಮ’ ಸೃಷ್ಟಿಯ ಹೂಟಕ್ಕೆ ಮೈಯಾಗಿದೆ ನವಿಲು

----------------------------------

Reg ID: BF25-5364

Please Note - You can vote only Once. If you have already voted - the voting will be disabled automatically by the system.

3
Votes
126
Views
10 Months
Since posted

VOTING Closed on Nov 30, 2025!

Scroll to Top