Submission 2605

ಹೀಗೆ ಹೋಗದಿರು

Submitted By: ಹಾ.ಮ ಸತೀಶ ಬೆಂಗಳೂರು

----------------------------------

ಹೀಗೆ ಹೋಗದಿರು ಚೆಲುವ ನನ್ನೊಲವ ತ್ಯಜಿಸುತಲೆ ಮೌನ ಕಂಬನಿ ಸುರಿಯೆ ಕುಳಿತಲ್ಲಿಯೆ ಬದುಕೆಲ್ಲ ಸೋಲುವುದು ಸೋಲಿನಲಿ ಗೆಲುವಿಹುದೆ ನನ್ನಂತರಂಗದೊಳು ಬಲವಿಲ್ಲದೆ ನನಸ ಅಂಗಳವೇರಿ ಕನಸುಗಳ ಹುಡುಕುತಿರೆ ಮರೆಯಾಗಿ ಹೋಗದಿರು ನನ್ನ ಬಿಟ್ಟು ಹೇಳಲಿರುವೆನು ಇಲ್ಲಿ ನೂರಾರು ಕತೆಗಳಿರೆ ನಿನ್ನೊಳಗೆ ನಾನಿರಲು ಮೌನ ಬಿಟ್ಟು ಹೃದಯದಾಳದಿ ಚಿತೆಯು ಧಗ ಧಗಿಸಿ ಉರಿಯುತಿರೆ ಬರಸೆಳೆದು ತಬ್ಬುವವ ನೀನೊಬ್ಬನೆ ಬಹು ಬೇಗ ಬಂದು ಬಿಡು ನನ್ನ ಒಲವಿನ ಹೂವೆ ನಿನಗಾಗಿ ಕಾದಿರುವೆ ಒಬ್ಬಂಟಿ ನಾನೆ

----------------------------------

Reg ID: BF25-5349

Please Note - You can vote only Once. If you have already voted - the voting will be disabled automatically by the system.

4
Votes
180
Views
10 Months
Since posted

VOTING Closed on Nov 30, 2025!

Scroll to Top