Submission 2603

ಬಾಳ ಗೆಳತಿ

Submitted By: Shriram Suresh Hegde

----------------------------------

ಸುಕೋಮಲ ಸುಂದರಿಯೇ ನಲ್ಮೆಯ ನುಡಿಯೊಂದು ಹಾಡಲು ನಾ ಉತ್ಸುಕ ನಾಗಿರುವೆನು ನಮ್ಮಿಬ್ಬರ ಪಯಣದ ದಾರಿಯಲ್ಲಿ ಕಂಡ ಕನಸು ನೀನು ಬಾನೆತ್ತರ ಅವಕಾಶಕೆ ನೀರ್ ಎರೆದ ಗೆಳತಿ ನೀನು ರವಿಯು ಬಾನೇರಿ ಕೆಂಪು ಚೆಲ್ಲಿದಾಗ ಅರಳಿದ ಹೂವಿನಂತೆ ಆಸೆ ಹೊತ್ತ ನಾನು ಅನುದಿನ ಹೊಸತನದಿಂದ ಕಂಗೊಳಿಸಿದ್ದು ನಿನ್ನ ಭರವಸೆಯ ನುಡಿಗಳಿಂದ ಭುವಿಯ ಸಹಕಾರದ ಗೆಳತಿ ಪ್ರೀತಿ ನೀಡಿದ ಹೃದಯವಂತ ಗೆಳತಿ ಪ್ರೇಮ ಚೆಲ್ಲಿದ ಬಾಳ ಪಥದಲ್ಲಿ ಉಲಿಯುತ ನಲಿಯೋಣ ಕುಣಿಯೋಣ ಬಾ ಅನು ರಾಗದಿ ಮನವ ಬೆಳಗಿ ನಮ್ಮಿಬ್ಬರ ಈ ಬಂಧ ಶಾಶ್ವತವಾಗಲಿ.

----------------------------------

Reg ID: BF25-5348

Please Note - You can vote only Once. If you have already voted - the voting will be disabled automatically by the system.

17
Votes
222
Views
11 Months
Since posted

VOTING Closed on Nov 30, 2025!

Scroll to Top