Submission 2601

ಅವ್ವ

Submitted By: NANDITA J PATIL

----------------------------------

ಕರೆಯಲು ಎಷ್ಟೇ ಸಮನಾರ್ಥಕ ಪದಗಳಿದ್ದರೂ, ""ಅವ್ವ"" ಎನ್ನುವ ಪದ ಕೊಡುವ ಸಂತೃಪ್ತಿಗೆ ಬೇರೊಂದು ಪದ ಈ ಮನವೆಂಬ ಜಗದಲ್ಲಿ ಉಂಟೇ? ನೀ ಮಾಡಿ ಕೊಟ್ಟ ಹಸಿಮೆಣಸಿನಕಾಯಿ ಬಿಸಿ ರೊಟ್ಟಿಗೆ ಸಮನಾದ ಮೃಷ್ಟಾನ್ನ ಭೋಜನ ಉಂಟೇ? ನಿನ್ನ ಪ್ರೀತಿ, ಮಮತೆ, ಕರುಣೆಗೆ ಸಮನಾದ ನಂಟು ಸಂಬಂಧವೆಂಬ ಸಮೂಹದಲ್ಲಿ ಉಂಟೇ? ಸ್ವಾಭಿಮಾನಿಯಾಗಿ ಸಮಾಜದಲ್ಲಿ ಬದುಕುವುದ ಕಲಿಸಿಕೊಟ್ಟೆಯಾದರೂ, ನಿನ್ನ ಬಿಟ್ಟು ಬದುಕುವುದ ಕಲಿಸಲಿಲ್ಲವೇಕೆ? ಸರಿಸಾಟಿ ಉಂಟೇ? ನಿನ್ನ ಮಡಿಲೆಂಬ ಸ್ವರ್ಗಕ್ಕೂ ಮಿಗಿಲಾದ ತಾಣ ಈ ಜಗದಲ್ಲಿ?

----------------------------------

Reg ID: BF25-5347

Please Note - You can vote only Once. If you have already voted - the voting will be disabled automatically by the system.

427
Votes
2,097
Views
10 Months
Since posted

VOTING Closed on Nov 30, 2025!

Scroll to Top