ಮಧು ಚಂದ್ರಿಕೆ
Submitted By: Mangala .D. Upadhya
----------------------------------
ಇರುಳ ಕನಸಿಗೆ ಜೊತೆಯಾದ ಮಧು ಚಂದ್ರಿಕೆ ಹೂ ನಗೆಯ ಚೆಲ್ಲುತ್ತಾ ಬಂದಳು ಹೃದಯಕೆ ಒಲವ ಮೃಷ್ಟಾನ್ನ ಉಣ ಬಡಿಸಿದಳು ಮುಚ್ಚಿದ ನಯನದಲೂ ಕಾಡಿದಳು ಎದೆಯಲ್ಲಿ ನಿನ್ನ ಹೆಜ್ಜೆಯ ಅಚ್ಚಾಗಿದೆ ಗೆಜ್ಜೆಯ ಘಲ್ ಮೀಟುತಿದೆ ಸ್ವಪ್ನದಲ್ಲಿ ಸಂಮೋಹಿನಿಯಾದೆ ನಸುಕಿನಲ್ಲಿ ಸಿಹಿ ನೆನಪಾದೆ ಅಗೋಚರ ಛಾಯೆ ನೀನು ಮಾಯೆ ಚಿತ್ತ ಕೆಡಿಸುವ ಚಂಚಲೆ ಸೌಂದರ್ಯದ ಗಣಿ ಬೆಳದಿಂಗಳ ಚೆಲುವೆ ಕಲ್ಪನೆಯ ಹೊನಲಲ್ಲಿ ಬಂದವಳು ಕವಿ ಹೃದಯ ಗೆದ್ದವಳು ಹೊಳೆಯುವ ಕಾಂತಿ ಅವಳು ಸುಂದರ ಕನಸಿಗೆ ನಾಂದಿಯಾದಳು
----------------------------------
Reg ID: BF25-5339
Please Note - You can vote only Once. If you have already voted - the voting will be disabled automatically by the system.