ನಿನ್ನೊಳಗೆ ನೀನಾಗಿ
Submitted By: MALATESH N CHALAGERI
----------------------------------
ಎಲೆ ಕಣ್ಣೆ ಬೇಡುವೆನು ನನ ಮಾತು ಆಲಿಸು ಬೆಲೆ ಕೊಡುವ ಬೆಲೆ ಇರುವ ಮನಸಿಗರ ತೋರಿಸು ತಲೆಯಿಂದ ತಾಮಸವ ಕಿತ್ತೊಗೆದು ನಡೆಯಲಿ ಸೆಲೆಯಾಗಿ ಹರಿಸಿ ಬಿಡು ಸಮರಸವ ಬಾಳಲಿ || ಎಲೆ ಹೃದಯ ನೀ ಕೇಳು ಜೀವನದ ನೀತಿ ನೆಲೆಯಾಗು ನೀಡುತಲಿ ಕ್ಷಮಿಸುವಾ ಶಕ್ತಿ ತನ್ನೊಳಗೆ ತನ್ನನ್ನು ಹುಡುಕಿದರೆ ಭಕ್ತಿ ಕ್ಷಮೆಯೊಂದೆ ಅಲ್ಲಿರಲು ಜೀವನಕೆ ಮುಕ್ತಿ || ಕರುಣಾಳು ಜೊತೆಗಿರುವ ನಂಬಿಕೆಯು ಇರಲಿ ನಗುನಗುತ ಸ್ವೀಕರಿಸು ಬರುವುದೆಲ್ಲವು ಬರಲಿ ಅಂಧ ಶ್ರದ್ಧೆಯ ತೊರೆಯೊ ಅದು ನಿತ್ಯ ಕೊಳಕು ಆ ದೇವ ಕತ್ತಲೆಯ ಓಡಿಸುವ ಬೆಳಕು|| ಕೈ ಕಚ್ಛೆ ಬಾಯಿಗಳು ಇರುತಿರಲು ಶುದ್ಧ ನಿನ್ನೊಳಗೆ ನೀನಾಗಿ ಆಗುವೆಯೂ ಬುದ್ಧ ||
----------------------------------
Reg ID: BF25-5232
Please Note - You can vote only Once. If you have already voted - the voting will be disabled automatically by the system.