ನಾವು ಒಟ್ಟಿಗೆ ಸೇರುವುದು ಎಂದು?
Submitted By: STEENATH M V
----------------------------------
ಬೆಂಗಳೂರೆಂಬ ಮಹಾಸಾಗರದಲ್ಲಿ ನಾವು ಪ್ರತಿಯೊಬ್ಬರೂ ಒಂದೊಂದು ದ್ವೀಪ. ಸಂಚಾರ ಶಾಪ. ನೆನೆಸಿಕೊಂಡಾಗಲೆಲ್ಲ ಹೋಗಲಾದೀತೆ?ಅಯ್ಯೋ ಪಾಪ! ಒಂದೆಡೆಯಿಂದ ಮತ್ತೊಂದೆಡೆ ಸಂಚರಿಸಲು- ಬೈಕು, ಸ್ಕೂಟರ್, ಬಸ್ಸು, ಕಾರು, ಮೆಟ್ರೊ ಸಾಲುವುದಿಲ್ಲ. ಮನೋವೇಗಕ್ಕೆ ಕ್ಷಣಕ್ಷಣವು ಅಡಚಣೆಗಳು. ಕಾಯಬೇಕು, ತೊಂದರೆಗಳ ಸಹಿಸಲೇಬೇಕು. ಅಳು ಒತ್ತರಿಸಿ ಬಂದರೆ ಅತ್ತುಬಿಡಬೇಕು. ಹೊರ ಬರಲಿ ಬಿಡು, ನಿಟ್ಟುಸಿರು. ಒಳಗೇ ಅದುಮಿಡಬೇಡ. ಏಕೆಂದರೆ, ಮುಂದೊಂದು ದಿನ ಹೃದಯಾಘಾತವಾದೀತು! ಮಾತಾಡು, ಸುಮ್ಮನಿರಬೇಡ! ಮೌನವಾಗಿದ್ದರೆ ಪರಭಾಷಿಕರಿಂದಾಗುವೆವು ನಾವೇ ಪರದೇಶಿ ನಾವೆಲ್ಲರೂ ಒಟ್ಟಿಗೆ ಸೇರದಿರಲು ನೂರೆಂಟು ನೆಪಗಳಿರುತ್ತವೆ.ಹಾಗಾಗುವುದು ಬೇಡ! ನಿಗದಿತ ಸಮಯಕ್ಕೆ, ಪೂರ್ವ ನಿರ್ಧರಿತ ಜಾಗಕ್ಕೆ ನಾವೆಲ್ಲ ಎಂದು ಸೇರೋಣ? ಹತ್ತಾರು ನಿಮಿಷ ಆಚೀಚೆ ಅಗಲಿ ಬಿಡು! ಬಾ ಜೊತೆಗೂಡು ಮುಖತಃ ಮಾತುಕತೆಯಾಡು
----------------------------------
Reg ID: BF25-5231
Please Note - You can vote only Once. If you have already voted - the voting will be disabled automatically by the system.