Submission 2302

ನನ್ನೊಲವೆ

Submitted By: ತಿರುಪತಿ ಎಸ್. ಪೂಜಾರ

----------------------------------

ನಡೆಸಿದೆ ಹೃದಯ ನಿನ್ನಯ ಗುಣಗಾನ ನನ್ನನ್ನೂ ಕೇಳದೆ ಪಿಸು ಮಾತನಾಡಿದೆ ನಿನ್ನ ಹೃದಯದೊಂದಿಗೆ ತಲ್ಲಣಗೊಂಡು ಹೇಳದೆ ಕಡಲು ದಾರಿ ತುಳಿಯುತ್ತಿದೆ ಮನ ನಿನ್ನನೇ ನೆನೆಯುತ ರಹದಾರಿ ಸಾಗಿದೆ ನನ್ನಯ ಅರಿವಿಗೂ ಬಾರದೆ ಪ್ರೇಮೋತ್ಸಾವದ ಪುಳಕದಲ್ಲಿ ರಮಿಸು ಒಲವೇ ನಿನ್ನ ಮಧುರ ಕಾವ್ಯದ ಕವನೆರಳನು ಕಾದು ಕುಳಿತ ಪ್ರೇಮಪಾರಿವಾಳಕೆ ಎನ್ನ ಮನದ ಹಂಗನೂ ಮರೆಯುವಂತಿದೆ ನಿನ್ನ ಪ್ರೇಮದ ಅಲೆಗಳ ರಭಸಕ್ಕೆ ನಿಲ್ಲದಾಗಿದೆ ಪ್ರಳಯದ ಅನುಭವ ಪಡೆಯದ ನಿನ್ನೀ ಇನಿಯನ ಅರಳು ನಯವಾದ ನಯನ ಪುತ್ರಿಕೆ ದಾರಿ ತಪ್ಪಿಹೋಗಿದೆ ಮಾರ್ಗಮಧ್ಯೆ ಕೈ ಹಿಡಿದು ಎನ್ನನು ದಡ ಸೇರಿಸು ಬಾ ನನ್ನೊಲವಿನ ಪ್ರೇಮ ಸಿಂಚನದ ವನಜವೆ

----------------------------------

Reg ID: BF25-5228

Please Note - You can vote only Once. If you have already voted - the voting will be disabled automatically by the system.

970
Votes
4,766
Views
11 Months
Since posted

VOTING Closed on Nov 30, 2025!

Scroll to Top