ನೂರು ನೆನಪು
Submitted By: Anjali shrinivas
----------------------------------
ನೂರು ನೆನಪು ಮೂಡಿವೆ ಮತ್ತೆ ಕಾಡುತಿವೆ ಬಿಡದೆ ಸುರಿವ ಮಳೆಯಲಿ ಕಣ್ಣ ಹನಿಯು ಜಾರಿವೆ ಅನುಮಾನ ಹೇಗೆ ಸುಳಿಯಿತೊ ಅನುರಾಗದಲಿ ಕನಸೊಂದು ಹೇಗೆ ಕಮರಿತೊ ಈ ಮೌನ ಕದನದಲಿ ಕಣ್ಣ ಹನಿಯಲಿ ನೆನಪುಗಳ ಚಿತ್ರಣ ಚೂರಾಗಿಹೆ ನಂಬಿಕೆಯ ದರ್ಪಣ ಮುಗಿಲಷ್ಟು ಆಸೆಗಳು ಕ್ಷಣದಲ್ಲಿ ಚೂರು ಮುಗಿಯದಷ್ಟಿವೆ ಈ ನಿರಾಶೆಗಳ ದೂರು ಆಸೆಯ ದೋಣಿ ಹೇಗೆ ನಿರಾಸೆಯ ದಡ ಸೇರಿತೊ ಅರಿಯದೆ ಬದುಕು ಹೇಗೆ ಬಣ್ಣ ಕಳೆದುಕೊಂಡಿತೊ
----------------------------------
Reg ID: BF25-5216
Please Note - You can vote only Once. If you have already voted - the voting will be disabled automatically by the system.