Submission 2241

ಬಾ ನನ್ನೊಂದಿಗೆ

Submitted By: ಸುನಿಲ್ ಲೇಖಕ್ ಎನ್

----------------------------------

ಬಾ ನನ್ನೊಂದಿಗೆ ಪ್ರೇಮ ಕವಿತೆ ಬರೆಯಲು ನಿನ್ನದೊಂದು ಸಾಲು ನನ್ನದೊಂದು ಸಾಲು ನಿನ್ನ ನಗುವಿನಿಂದ ನನಗೆ ಸೋಲು ನನ್ನ ಮಾತಿನಿಂದ ನಿನಗೆ ಸೋಲು. ತೆರೆ ನೀ ಕಾವ್ಯದ ಕದ ಇರಲಿ ಇಬ್ಬರದ್ದು ಪದಕ್ಕೊಂದು ಪದ ಆದಂತೆ ಇಬ್ಬರ ಹೃದಯಗಳ ಸಮ್ಮಿಲನ ಆರದೇ ಬೆಳಗುತಿರಲಿ ನಮ್ಮೀ ಕವನ.

----------------------------------

Reg ID: BF25-5217

Please Note - You can vote only Once. If you have already voted - the voting will be disabled automatically by the system.

0
Votes
109
Views
11 Months
Since posted

VOTING Closed on Nov 30, 2025!

Scroll to Top