ಸ್ವಾತಂತ್ರ್ಯದ ಹಣತೆ
Submitted By: ಡಾ. ಮಾಸ್ತಿ ಬಾಬು
----------------------------------
ಈ ದಿನ ಶುಭದಿನ ನಮ್ಮಯ ಹೆಮ್ಮೆಯ ಭಾರತಕ್ಕೆ ದಾಸ್ಯತೆಯಿಂದ ಮುಕ್ತಿಯ ಪಡೆದು ಭಾರತೀಯರು ಸಂಭ್ರಮಿಸಿದ ದಿನವಿದುವೇ ಭಾರತ ಮಾತೆಯ ಮಡಿಲಲ್ಲಿ ಜನಿಸಿದ ಕಲಿಗಳು ನಾವೆಲ್ಲ ಏನೇ ಬರಲಿ, ಏನೇ ಆಗಲಿ ದೇಶಕ್ಕೆ ಮುಡಿಪು ನಮ್ಮಯ ಉಸಿರೆಲ್ಲ ಜಾತಿ ಧರ್ಮವ ತೊರೆದು ಒಗ್ಗಟ್ಟಿನಿಂದ ಬದುಕೋಣ ಏನೇ ಆಗಲಿ, ಏನೇ ಬರಲಿ ಐಕ್ಯತೆಯಿಂದ ಮೆರೆಯೋಣ ವಿಶ್ವದ ಜನಕೆ ನಮ್ಮಯ ದೇಶದ ಹಿರಿಮೆಯನ್ನು ಸಾರೋಣ ಭಾರತ ಒಂದೇ ಮಾದರಿ ದೇಶ ಎಂಬುದನು ನಾವು ತಿಳಿಸೋಣ ವಿವಿಧತೆಯಲ್ಲಿ ಏಕತೆ ತೋರುತ ಸೋದರತೆಯಿಂದ ಬಾಳೋಣ ಎಲ್ಲರೂ ಕೂಡಿ ಬೆಳೆಯುತ ದೇಶದ ಐಕ್ಯತೆ ಕಟ್ಟೋಣ
----------------------------------
Reg ID: BF25-5169
Please Note - You can vote only Once. If you have already voted - the voting will be disabled automatically by the system.