Submission 2025

ಹರಿದು ಹೋಗಿತ್ತು

Submitted By: Sudha Patil

----------------------------------

ಹೀಗೊಂದು ರಾತ್ರಿಯಲಿ ಹರಿದು ಹೋಗಿತ್ತು ಬಣ್ಣ ಬಣ್ಣದ ಕೌದಿ ಹೊಲೆದು ಮತ್ತೆ ಗಟ್ಟಿಗೊಳಿಸಿದೆ ಭಾವಗಳ ಸರಕು ಅದೆಷ್ಟೋ ಬಯಕೆ ಭರವಸೆಗಳ ಮೂಟೆ ಕಳೆದುಹೋಗಿತ್ತು ಇರುಳು ಹಗಲಾಗುವ ವೇಳೆ ಉದಯಿಸಿದ ಸೂರ್ಯ ಮತ್ತೆ ಎಲ್ಲವ ಮರೆತು ಹಳೆಯ ಬಟ್ಟೆ ಹೊಸದು ಬದುಕು ಕಳೆದ ಭೂತದ ನೋವು ಬರುವ ನಾಳೆಯ ಬೆಳಗು ಇಂದು ಮುಸಂಜೆಯಲಿ ನಿರಂತರ ಹುಡುಕಾಟ ಕಟ್ಟಿ ಕೊಡಲು ಬಾಳು ಕೌದಿ ಹರಿದಾಗಲೆಲ್ಲ ಮತ್ತೆ ತೇಪೆ ಹಚ್ಚುವೆ ಬದುಕಬೇಕು ಚಳಿ ಒಳಗೂ ಹೊರಗೂ

----------------------------------

Reg ID: BF25-5171

Please Note - You can vote only Once. If you have already voted - the voting will be disabled automatically by the system.

8
Votes
126
Views
10 Months
Since posted

VOTING Closed on Nov 30, 2025!

Scroll to Top