ಸಂಸಾರ
Submitted By: ಪಿ. ಶಾರದಮ್ಮ
----------------------------------
ಬಿಸಿ ಇರಲಿ ತಂಪಿರಲಿ ಕೋಪವಿರಲಿ, ಸಮಾಧಾನವಿರಲಿ,ಒಗ್ಗುವಂತಿರಲಿ, ಒಗದಂತಿರಲಿ, ಬಗ್ಗಿಸಿ ಮಾಡಬೇಕು ಸಂಸಾರ. ಕಷ್ಟವಿರಲಿ, ಸುಖವಿರಲಿ, ನೋವಿರಲಿ,ನಲಿವು ಇರಲಿ, ಹಿಗ್ಗಿರಲಿ,ಕುಗ್ಗಿರಲಿ,ಬಗ್ಗದೆ ಎದ್ದು ಮಾಡಬೇಕು ಸಂಸಾರ. ಹೊಗಳಿಕೆ ಇರಲಿ,ತೆಗಳಿಕೆ ಇರಲಿ,ಸೋಲು ಇರಲಿ, ಗೆಲುವಿರಲಿ, ಅರಳುತಿರಲಿ,ಬಾಡುತ್ತಿರಲಿ, ಒಣಗಿ ನೆನೆದು ಮಾಡಬೇಕು ಸಂಸಾರ. ಇವೆಲ್ಲವ ಅರಿತು ಮಾಡಿದಾಗ ಸಂಸಾರ, ಉಳಿಯುವುದು ಜೀವನದ ಸಾರ, ಅದೇ ಜೀವಕ್ಕೆ ಆಧಾರ.
----------------------------------
Reg ID: BF25-5168
Please Note - You can vote only Once. If you have already voted - the voting will be disabled automatically by the system.