ನಲ್ಮೆಯ ನಿಲ್ಮನೆ
Submitted By: Mahantesh R Kumbar
----------------------------------
ಹೇಳುವೆ ಸಖಿಯೇ ನೀ ಕೇಳು ಸುಮ್ಮನೆ, ಒಲ್ಮೆಗೆ ನಿನ್ನೆದೆಯೇ ನಲ್ಮೆಯ ನಿಲ್ಮನೆ ಮೋಹವು ತಂಗಲು,ದಾಹವು ಇಂಗಲು ನೀಡಬೇಕಿದೆ ಆಮಂತ್ರಣ ಜೀವವೇ ಬಂದರು,ಭಾವವೇ ಲಂಗರು ನಡೆಯಬೇಕಿದೆ ಆಲಿಂಗನ ಅಲೆಯು ತಾಕಲು,ದಡವ ಸೋಕಲು ಕ್ಷಣ ಕ್ಷಣ ದಿವ್ಯ ಸಂಗಮ ಹನಿಯು ಜಾರಲು,ಚಿಪ್ಪಿಗೆ ಸೇರಲು ಮುತ್ತಾಗುವ ಸಂಭ್ರಮ ಏನೊಂದು ತೋಚದೇ,ಏನನೋ ಗೀಚಿಹೆ ಒಂದು ಬಾರಿ ನೀ ಓದಿ ಬಿಡು ಮನವನು ದೋಚುತ,ಮೆಲ್ಲಗೆ ನಾಚುತ ಬರಿದೆದೆಗೆ ಬಂದಿಳಿದು ಬಿಡು
----------------------------------
Reg ID: BF25-5043
Please Note - You can vote only Once. If you have already voted - the voting will be disabled automatically by the system.