Submission 1459

ನಿನ್ನೊಲುಮೆಯೊಂದೇ ಅಚಲ

Submitted By: Mittesa Nabisa Mulla

----------------------------------

ಸತ್ಯಸಂಧನಾಗಿ ನೀ ನಡೆ ನಿನ್ನ ದುರುಪಯೋಗಪಡಿಸಿಕೊಳ್ಳೋದನ್ನ ತಡೆ ನೈತಿಕವಾಗಿ ನೀ ಬಲಿಷ್ಟನಾಗಿದ್ದೆಡೆ ಕಪಟಿಗಳ ಮುಖವಾಡವ ತೊಡೆ ದೌರ್ಬಲ್ಯಗಳಿಂದ ಅಭಯ ಯಾಚಿಸು ದೇವನೆಡೆ ಸುಳಿಯದೆ ಗತ ತಪ್ಪುಗಳೆಡೆ ಮನಸೆಳೆವ ಚಿತ್ತವಿಕಾರಗಳಿಗೆ ಕಟ್ಟು ತಡೆಗೋಡೆ ಸಭ್ಯ, ಸಮತೋಲಿತ ಜೀವನದಲ್ಲಿ ಸಂತೃಪ್ತಿ ಪಡೆ ಸ್ವ ರಕ್ಷಣೆಯ ಕಲೆಯನರಿತು ಮುನ್ನಡೆ ಇದ್ದುದ ನುಡಿದು ಧೈರ್ಯದಿ ತೊಲಗಿಸು ಪೀಡೆ ವೇಗದ ಜಗದಿ ಸಭ್ಯ ಜೀವನ ಮುಳ್ಳಿಹಾಸಿನ ನಡೆ ಅಂಧನಾಗಿ ನಂಬಿದರ ಬೀಳೋದು ಪೆಟ್ಟು ಎಲ್ಲೆಡೆ ಹಾಗಂತ ಅಪನಂಬಿಕೆಯ ಭಾರ ಹೊರೆನು; ನಿರ್ಭೀಡೆ! ಓ ಚಿರಂತನನೇ!ನಿನ್ನೊಮೆಯೊಂದೇ ಅಚಲ ಜಗದೆಲ್ಲೆಡೆ

----------------------------------

Reg ID: BF25-5029

Please Note - You can vote only Once. If you have already voted - the voting will be disabled automatically by the system.

32
Votes
291
Views
8 Months
Since posted

VOTING Closed on Nov 30, 2025!

Scroll to Top