Submission 3845

ನೀರೇ ನೀನ್ಯಾರೆ?

Submitted By: SRINIVASA V

----------------------------------

ಇವಳು ಸುಗುಣ ಗುಪ್ತಗಾಮಿನಿ ಹತ್ತಿರವೆ ಹರಿದಂತೆ ಸುತ್ತಿದರು ಸಿಗದಂತೆ ಪ್ರಬುದ್ಧವಾಗಿ ಮೆರೆಯುವವಳೋ, ಅಪ್ರಬುದ್ಧವಾಗಿ ಅಲೆಯುವವಳೋ ನಮ್ಮರಿವಿಗೆ ಅವಳೆದೆ ಕದ ತೆರದಂತೆ ಒಳಹೊಕ್ಕಲು ಮರುಘಳಿಗೆ ಪರದೆ ತಾನ್ ಎಳೆದಂತೆ... ಸ್ವಯಂ ವಿಮರ್ಶಣೆ - ಅನಂತ ಆಕರ್ಷಣೆ .. ಹುದುಗಿ ಹೋದ ವಿಷಯ ಹುಡುಕೆ ಎಂತದೋ ವಿಕರ್ಷಣೆ... ಎಂಥ ಸಂಗವೋ ಇವಳದೆಂಥ ವೆಂಗ್ಯವೋ? ಮಿತಿಮೀರಬಹುದು ಪರರು ಎಂಬ ಜಾಣಜಂಬವೋ! ನುಡಿಯ ಬಲ್ಲಳು ನುಡಿಯ ಕದಿಯಬಲ್ಲಳು! ನಕ್ಕ ಹಾಗೆ ನಟಿಸಿ ನಗೆಯ ಗೆಲ್ಲಬಲ್ಲಳು ... ಮೋಹ ತಂದಳೋ? ಇಲ್ಲ ಮೋಹಗೊಂಡಳೋ? ಹಾವಭಾವ ತೋರಿ ಹರೆಯದೋಚಿಕಂಡಳೋ? ಕಾಣುತ್ತಿಲ್ಲ ಹುಡುಕೊ ಜನಕ್ಕೆ ಎಲ್ಲಿ ಹೋದಳೋ? ತನ್ನ ಸಂತೆಯಲ್ಲೇ ತನ್ನ ಮಾರಿಕೊಂಡಳೋ? ಅಪರಿಚಿತ ಅನುಭಾವಕೆ ಸಿಲುಕಿದಂತಾಗಿದೆ, ಕಳೆದು ಹೋದ ಅವಳ ಕಾವ್ಯ ಮತ್ತೆ ಹುಡುಕಬೇಕಿದೆ!! ಮತ್ತೆ ಮತ್ತೆ ಕೇಳಬೇಕೆ ಯಾರು ಈಕೆ ಎಂದು? ಬೆರೆಯಲಿಲ್ಲ, ಬಳಸಲಿಲ್ಲ, ಭಾವ ಬಂಧ ಬಸಿಯಲ್ಲಿಲ್ಲ, ಹೇಗೆ? ತಿಳಿಸಿ ಹೇಳಲಿ ನಿಗೂಢ ನೀರೆ ಹಾವಳಿ!

----------------------------------

Reg ID: BF25-5868

Please Note - You can vote only Once. If you have already voted - the voting will be disabled automatically by the system.

1
Votes
130
Views
10 Months
Since posted

VOTING Closed on Nov 30, 2025!

Scroll to Top