Submission 3041

ಪ್ರಕೃತಿಗೆ ಒಂದು ಪ್ರೇಮ ಪತ್ರ

Submitted By: RAHUL M HARUGOPPA

----------------------------------

ಹೇ ಪರಿಸರವೇ, ಆ ನಿನ್ನ ಸರಳ ಸುಂದರ ಹಸಿರ ಸೌಂದರ್ಯಕ್ಕೆ ಎಲ್ಲರೂ ಸೆರೆ. ಆ ನಿನ್ನ ವಿಶಾಲ ಪ್ರಕೃತಿ ಸೌಂದರ್ಯದ ಮಡಿಲು ಎಲ್ಲ ಪಶು ಪಕ್ಷಿಗೆ ಆಸರೆ. ನಾನು ಆಗಲೇ ಮನಸಾರೆ ನಿನ್ನ ಕೈಸೆರೆ? ದಾರಿಹೋಕರನು ಬರಮಾಡಿಕೊಳ್ಳುತ್ತಿರುವಂತೆ ನಿನ್ನ ಸಾಲು ಸಾಲು ಮರಗಳು, ಕೈಬೀಸಿ ಕರೆಯುವಂತಿದೆ ಆ ಮರಗಳ ಹಸಿರೆಲೆಗಳು. ಅವಿಸ್ಮರಣೀಯ ಆ ನಿನ್ನ ಗಿರಿ,ಶಿಖರ, ಬೆಟ್ಟಗುಡ್ಡಗಳು ಪರ್ವತ ಶ್ರೇಣಿಗಳು, ಅವುಗಳು ಸ್ವರ್ಗಕ್ಕೆ ಹಿಡಿದ ಕನ್ನಡಿಯಂತೆ . ಆ ಗಿರಿ ಶ್ರೇಣಿಗಳ ಮುಡಿಯಿಂದ ಅಡಿವರೆಗೆ ಹಾಲ್ನೋರೆಯಂತೆ ಧುಮುಕುವ ಜಲಪಾತಗಳ ಝುಳು ಝುಳು ಸದ್ದಲಿ ತಲ್ಲೀನನಾಗುವ ಆಸೆ. ಈ ಹಚ್ಚು ಹಸಿರಾದ ಪ್ರಕೃತಿ ಮಡಿಲಲ್ಲಿ , ಹುಚ್ಚು ಮನಸ್ಸಿನ ಹುಚ್ಚು ಹೆಚ್ಚಿತು. ಈ ಹುಚ್ಚು ಪ್ರೀತಿಯು ಹಸಿರಿಗಾಗಿ ಹೊರತು ಇನ್ಯಾರಿಗಲ್ಲ...

----------------------------------

Reg ID: BF25-5538

Please Note - You can vote only Once. If you have already voted - the voting will be disabled automatically by the system.

122
Votes
725
Views
1 Year
Since posted

VOTING Closed on Nov 30, 2025!

Scroll to Top