Submission 3053

ಕನ್ನಡ ನಾಡಿನ ಸಿರಿ

Submitted By: Basappa Birappa Ittannavar

----------------------------------

ಕನ್ನಡ ನಾಡಿನ ಸಿರಿಯನು ಹಾಡುತ. ಹಾಕತೀನ ಹುಟ್ಟು ಹಂಪಿ ಬೇಲೂರ ಹಳೆಬೀಡು ಶಿಲೆ ಗಳು ಕನ್ನಡ ನೆಲದಲ್ಲಿ ಬದಾಮಿ ಪಟ್ಟದಕಲ್ಲ ಐಹೊಳೆ ಕಲೆಯನೋಡಿರಿಲ್ಲಿ//ಪ// ಅಕ್ಕಮಹಾದೇವಿ,ಬಸವಣ್ಣ,ಅಲ್ಲಮ ಜನ್ಮತಾಳ್ಯಾರಿಲ್ಲಿ. ಪಂಪ, ರನ್ನ, ಹರಿಹರ ಕುಮಾರವ್ಯಾಸ ಕನ್ನಡ ನೆಲದಲ್ಲಿ. ಸಿದ್ಧಾರೂಢ,ಶರೀಫ, ನಾಗಲಿಂಗ ಕೊಟ್ರ ನಮಗ ಜ್ಞಾನ. ಅವರ ಭೋದ ಅರಿತವರಿಗಾಗತೈತಿ ಕೂಡದ್ಹಾಂಗ ಹಾಲು ಜೇನ.//01// ಬೆಳವಡಿ ಮಲ್ಲಮ್ಮ, ಕೆಳದಿ, ಕಿತ್ತೂರ ಚೆನ್ನಮ್ಮ ಮಹಿಳೆಯರು. ವನಕೆ ಓಬವ್ವ, ಉಳ್ಳಾಲ ರಾಣಿ ಅಬ್ಬಕ್ಕ ದೇವಿಯರು. ಟಿಪ್ಪು, ಪುಲಕೇಶಿ, ಮದಕರಿನಾಯಕ, ಕೃಷ್ಣದೇವರಾಯ ನಾಡು. ಸಿಂಧೂರ ಲಕ್ಷ್ಮಣ, ಸಂಗೊಳ್ಳಿ ರಾಯಣ್ಣ ವೀರರು ಮಡಿದ ನಾಡು.//02// ಕುಪ್ಪಳ್ಳಿ ಪುಟ್ಟಪ್ಪ, ದ, ರಾ, ಬೇಂದ್ರೆ, ಶಿವರಾಮ ಕಾರಂತರು. ಮಾಸ್ತಿ ವೆಂಕಟೇಶ, ವಿ. ಕೃ. ಗೋಕಾಕ, ಅನಂತ ಮೂರ್ತಿಯರು. ಕಾರ್ನಾಡ, ಕಂಬಾರ ಜ್ಞಾನ ಹರಿಸ್ಯಾರ ನಾಡದೇವಿ ಶಕ್ತಿ. ಜ್ಞಾನಪೀಠ ಪ್ರಶಸ್ತಿ ಗಳಿಸಿ ತಂದಾರ ನಾಡ ಕೀರ್ತಿ.

----------------------------------

Reg ID: BF25-5543

Please Note - You can vote only Once. If you have already voted - the voting will be disabled automatically by the system.

0
Votes
117
Views
11 Months
Since posted

VOTING Closed on Nov 30, 2025!

Scroll to Top