Submission 2524

ನಿನ್ನ ಕವಿತೆಗಳು

Submitted By: Dr.Chetan S

----------------------------------

ಮತ್ತೆ ಬರೆಯಬೇಕೆನಿಸಿತು ಕವಿತೆ.. ನೀ ಬಂದ ಮೇಲೆ.. ಕಣ್ಣೊಟದಲ್ಲೆ ಹುಟ್ಟಿದವು ನೂರಾರು ಕವಿತೆಗಳು ಯಾವ ಮಾತೂ ಆಡದೆ. ಒಪ್ಪಿಸಿಕೊಂಡವು ನನ್ನ ಅಂದದ ಹಾಳೆಗೆ ಯಾವ ತಕರಾರು ಇಲ್ಲದೆ. ತಾವೆ ಬಂದು ಬರೆಸಿಕೊಂಡವು ನಿನ್ನ ಕಿರುಬೆರಳ ಅಪ್ಪಣೆಗೆ ಅರ್ಧವಾಗಿದ್ದವು ಕೆಲವು, ಪೂರ್ತಿಯಾದವು ನಿನ್ನೊಂದು ಕಿರುನಗೆಯಿಂದ ಕಳೆದು ಹೋಗಿದ್ದವು ಕೆಲವು ಹುಡುಕಿಕೊಟ್ಟೆ ನಿನ್ನೊಲವಿಂದ ಹಾಡಾದವು ಮರೆತೆಹೋಗಿದ್ದ ಹತ್ತುಹಲವು ಒತ್ತಾಯಿಸಿದುವು ಬಿಡುಗಡೆಗೆ ನನ್ನ ದನಿಯಿಂದ ಏನು ಹೇಳಲಿ ಎಷ್ಟು ಬರೆಯಲಿ ನಿನಗಾಗಿ ನನ್ನ ಬಳಿ ನಿನ್ನೊಲವ ಬರೆಯಬಹುದಾದ ಪದಗಳಿಲ್ಲ.

----------------------------------

Reg ID: BF25-5312

Please Note - You can vote only Once. If you have already voted - the voting will be disabled automatically by the system.

1
Votes
148
Views
10 Months
Since posted

VOTING Closed on Nov 30, 2025!

Scroll to Top