Submission 3819

ನನ್ನವರಾರೋ

Submitted By: Deepashree K

----------------------------------

ನನ್ನವರಾರೋ, ನನ್ನನ್ನು ಅರಿತವರಾರೋ.. ಅರಿತು ನುರಿತವರಾರೋ, ಸಂಬಂಧಗಳಲ್ಲಿ ಬೆರೆತವರಾರೋ.. ಹರಸಿ ಒಳಿತನ್ನು ಬಯಸಿದವರಾರೋ, ಹೆತ್ತವರಾರೋ.. ಸ್ನೇಹಿತರಾದವರಾರೋ, ಜೀವನದ ಜೊತೆ ಜೊತೆಗೆ ಸಾಗುವವರಾರೋ.. ಕಂದಮ್ಮಗಳಾಗುವರಾರೋ, ಮುಪ್ಪಿನಲ್ಲಿ ನೆರಳಾಗಿ ನೆರವಾಗುವವರಾರೋ.. ನಮ್ಮವರಂತೆ ನಟಿಸುವರಾರೋ, ಕೆಡಕನ್ನು ಬಯಸುವವರಾರೋ.. ಮುಖವಾಡ ಧರಿಸಿರುವವರಾರೋ, ಬದುಕನ್ನು ಚಿವುಟುವವರಾರೋ.. ತುಚ್ಚವಾದ ನುಡಿಮುತ್ತುಗಳನ್ನು ನುಡಿಯುವವರಾರೋ, ಶತ್ರುಗಳಾರೋ .. ಮಿತ್ರರಾರೋ, ಬದುಕಿನ ಹಾದಿಯಲ್ಲಿ ಬಂದು ಹೋದವರಾರೋ, ನನ್ನವರೆಂಬುವವರು ನೂರಾರು, ಜೊತೆಜೊತೆಗೆ ಸಾಗುವರು ಕೆಲವರು.. ಒಳಿತನ್ನು ಬಯಸುವವರು ಹಿತವರು, ನೆರವಾಗುವವರು ಅಲ್ಪರು.. ಕೆಲವರು ನಂಬಿಕಸ್ಥರು, ನೆರಳಾಗಿ ಉಳಿವರು ಉತ್ತಮರು.. ನನ್ನವರಲ್ಲೇ ಉತ್ತಮರಾದ ಹೆತ್ತು ಹೊತ್ತವರು, ನನ್ನ ದೇವರು.. ನನ್ನ ಜೀವನದ ಕೊನೆಯ ಬಿಂದುವಿನವರೆಗೂ ಜೊತೆಯಾಗಿಯೂ.. ಜೀವನದ ಜ್ಯೋತಿಯಾಗಿಯೂ ಇರುವರು....ಓಲೈಸುವರು....

----------------------------------

Reg ID: BF25-5863

Please Note - You can vote only Once. If you have already voted - the voting will be disabled automatically by the system.

8
Votes
198
Views
10 Months
Since posted

VOTING Closed on Nov 30, 2025!

Scroll to Top