ಶಿವರಾತ್ರಿ
Submitted By: Mrs. ANITA S. YADEHALLI
----------------------------------
ಅಂದು ಶಿವರಾತ್ರಿ ಆಚರಣೆ ಉಪವಾಸದ ಆಚರಣೆ ಬರಿಯ ಫಲಹಾರ ಅಷ್ಟೇನೆ ! ದಿನದ ವಿಶೇಷ ಕಲ್ಲಂಗಡಿ ಹಣ್ಣೆ ಬಗೆ ಬಗೆಯ ತಿಂಡಿಗಳ ನಮೂನೆ ಮಾಡಿದರು ಹಾಕಿ ಘಮಘಮಿಸುವ ಒಗ್ಗರಣೆ ! ತರ ತರಹದ ಹಣ್ಣುಗಳ ಸೀಕರಣೆ ಮಾಡಿದರು ಎಲ್ಲವ ಶಿವನಿಗೆ ಸಮರ್ಪಣೆ ನಂತರ ಅವರವರ ಉದರದ ಪೋಷಣೆ ಸವಿದು ಫಲಾಹಾರದ ರುಚಿನೇ ಮರೆತೇಬಿಟ್ಟರು ಶಿವನ ಧ್ಯಾನವನೇ ಮಲಗಿಬಿಟ್ಟರು ಎಂದಿಗಿಂತ ಬೇಗನೇ ಮಾಡುತ್ತಾ ದಿನದ ವಿಶೇಷ ಜಾಗರಣೆ
----------------------------------
Reg ID: BF25-5856
Please Note - You can vote only Once. If you have already voted - the voting will be disabled automatically by the system.