ನನ್ನೊಳಗಿನ ಅವನು
Submitted By: Girish Mayachari
----------------------------------
ಹತಾಶಾಭಾವದ ಬಿರುಗಾಳಿಗೆ ತತ್ತರಿಸಿ ಕಾಲೆಳೆಯುತಾ ಹೋಗೆದುರಿಗೆ ನಿಂತೆ ನಿಟ್ಟುಸಿರೆಳೆದು ನೋಡಿದೆ ದಿಟ್ಟಿಸಿ ಕಂಡನು ಸ್ವಾನುಕಂಪದಿ ಮುಳುಗಿದಂತೆ ಕೋಪದಿಂದಲೇ ಕೇಳಿದೆ ಪ್ರಶ್ನೆಗಳನು ನನ್ನನು ವೈರಿಯೆಂದು ಪರಿಗಣಿಸಿ ವರ್ತಿಸಿದೆಯೇಕೆ ಅಸಹಾಯಕನಂತೆ ನನ್ನೆಲ್ಲ ಸಲಹೆಗಳನು ಕಡೆಗಣಿಸಿ ನಿಂತಿರುವೆಯೇಕೆ ಮೂರ್ಖನಂತೆ ಕೈಬಿಟ್ಟೆಯೇಕೆ ಸಿಕ್ಕ ಅವಕಾಶಗಳನು ಮೌನವಾಗಿ ನಿಂತಿರುವನು ತಲೆತಗ್ಗಿಸಿ ಭುಗಿಲೆದ್ದಿತು ಆಕ್ರೋಶ ಜ್ವಾಲೆಗಳಂತೆ ಬಲವೆಲ್ಲಾ ಬಿಟ್ಟು ಹೊಡೆದೆ ಕೈಬೀಸಿ ರಕ್ತ ಸುರಿಯೆ ಕೈಯಿಂದ ಮಳೆಯಂತೆ ಮೆಲ್ಲನೆ ತೆಗೆದೆ ಕನ್ನಡಿಯ ಚೂರುಗಳನು
----------------------------------
Reg ID: BF25-5849
Please Note - You can vote only Once. If you have already voted - the voting will be disabled automatically by the system.