ಕುರುಡು ವಾತ್ಸಲ್ಯ್
Submitted By: Poornima R B Patil
----------------------------------
ಅಳುವ ಕಂದನಿಗಾಗಿ, ತಾಯಿ ಉಣಿಸಿದಳು ತುತ್ತು ಅನ್ನ... ವೃಧಶ್ರಮದಲ್ಲಿಯ ಮೃತ ತಾಯಿಗೆ, ಬರಲಿಲ್ಲ ಮಗ ಹಾಕಲು ಹಿಡಿ ಮಣ್ಣಾ... ಮರುಗಿತು ಜೀವ, ಇಂದು ಬರುವಾ, ನಾಳೆ ಬರುವಾ ಮಗನೆಂದು... ಅರಿಯಲಿಲ್ಲ ತಾಯಿ ಹೃದಯ, ಮಗ ತೋರಿಸುವ ಪ್ರೀತಿ ಹುಸಿಯೆಂದು... ವಾತ್ಸಲ್ಯದ ಹೆತ್ತ ಕರಳು, ಕುರುಡು ನಂಬಿಕೆಯಲ್ಲಿ... ಕಟು ಮನಸ್ಸಿನ ಮಗ, ಹಣದ ಮೋಹದಲ್ಲಿ... ಅಂದು ಅಪ್ಪಿದಳು ಮಗನನ್ನು, ಮಮತೆಯ ಕೈ ಚಾಚಿ... ಇಂದು ಹೊರಟಳು ತಾಯಿ, ಎಂದೂ ಬಾರದ ಲೋಕಕ್ಕೆ ಕಣ್ಣು ಮುಚ್ಚಿ...
----------------------------------
Reg ID: BF25-5828
Please Note - You can vote only Once. If you have already voted - the voting will be disabled automatically by the system.