ಸ್ವಾರ್ಥ ಸಂಗಾತಿ
Submitted By: Akshata C Hiremath
----------------------------------
ನಿಮ್ಮ ಅಂತರಂಗದಲ್ಲಿ ನಲಿಯಬೇಕೆನ್ನುವ ನವಿಲು ನಾನು ನನ್ನ ಪ್ರತಿ ಭಾವವು ನೀವಾಗಬೇಕೆನ್ನುವ ಕಾದಂಬರಿ ನಾನು ನಿಮ್ಮ ಪ್ರಕಾಶತೆಯನ್ನೂ ಹೆಚ್ಚಿಸಬೇಕೆನ್ನುವ ಇರುಳು ನಾನು ನಿಮ್ಮ ಪ್ರತಿಹೆಜ್ಜೆಯನ್ನು ಹಿಂಬಾಲಿಸಬೇಕೆನ್ನುವ ನೆರಳು ನಾನು ನಿಮ್ಮ ಹೃದಯಂಗಳದ ಧಮನಿಯಲ್ಲಿ ಹರಿಯಬೇಕೆನ್ನುವ ನೆತ್ತರು ನಾನು ನಿಮ್ಮ ಎಲ್ಲಾ ಬಯಕೆಗಳಿಗೆ ಬಲವಾಗಬೇಕೆನ್ನುವ ಚೇತನ ನಾನು ಹೀಗೆ, ನಿಮ್ಮ ಬದುಕಲ್ಲಿ, ನಿಮಗೇ ಎಲ್ಲವು ನಾನೇ ಆಗಬೇಕೆನ್ನುವ ಸ್ವಾರ್ಥ ಸಂಗಾತಿ ನಾನು
----------------------------------
Reg ID: BF25-5829
Please Note - You can vote only Once. If you have already voted - the voting will be disabled automatically by the system.