Submission 3690

ನನ್ನೊಲುಮೆ

Submitted By: BHIMADEV V KOPPAD

----------------------------------

ಕರದೀಪ ನಾಚಿ ನಲಿಯುತ್ತಿರಲು ನಿನ್ನಂದಕೆ ಸೋತಿದೆ ಬೆಳಗುತ್ತಿರಲು ದೀಪದ ಹಂಗಕೆ ಬೆಳದಿಂಗಳಕೆ ಬೆಳಕಿನ ಹಂಗಕೆ ನಿನ್ನೀ ಅಂದಕೆ ಪ್ರೀತಿಯನೆರೆವ ಪ್ರಕೃತಿ ನೀ ಅಂದವನಾಳುವ ಅರಸಿಯು ನೀ ನವಿಲುನಡಿಗೆಯ ಚೆಲುವೆಯು ನೀ ಸವಿನುಡಿಯ ರಸ-ಋಷಿಯು ನೀ ಕಂಗೋಳಿಸುವ ಕಣ್ಗಳ ಕಂಪು ಬೆಳದಿಂಗಳ ಬಿಂಬಿಸುವ ಚಂಪೂ ತುಟಿಯಂಚಿನ ತುಂಟ ಮುಗುಳುನಗೆ ದಂತಪಂಕ್ತಿಯಲಿ ತೋರುವ ಕಿರುನಗೆ ಕೋಮಲ ಮನಸಿನ ಸುಕುಮಾರಿ ಅಂದದ ಗಣಿಯು ಚೆಲುವಿನ ಕುವರಿ

----------------------------------

Reg ID: BF25-5812

Please Note - You can vote only Once. If you have already voted - the voting will be disabled automatically by the system.

14
Votes
204
Views
6 Months
Since posted

VOTING Closed on Nov 30, 2025!

Scroll to Top