ದೀಪಾವಳಿ
Submitted By: Sreekanth st
----------------------------------
ದೀಪಾವಳಿ ಚಂದದ ಬೆಳಕಿನ ದೀಪಾವಳಿ ನಮ್ಮ ನಿಮ್ಮ ಬದುಕಿನ ನವೋಲ್ಲಾಸದ ಉದಯ ದೀಪಾವಳಿ ! ಒಲವಿನ ಬೆಳಕು ಬರಲಿ ಮನೆ ಮನಗಳಲಿ ಅದುವೇ ಗೆಲುವಿನ ದೀಪಾವಳಿ ! ನವದಿನವ ಬಂದು ಹಳೆಯ ಕಷ್ಟ ನಷ್ಟ ದೂರಮಾಡುವ ಸ್ಫೂರ್ತಿಯ ದೀಪಾವಳಿ ! ಹೊಸ ಚಿಗುರು-ತಳಿರು ತೋರಣದಿ ಪ್ರೀತಿ ,ವಿಶ್ವಾಸದ ಸ್ವಾದದ ದೀಪಾವಳಿ ! ಸಂಭ್ರಮ ತುಂಬಿಬರಲಿ ಅನುದಿನವೂ ಖುಷಿಯಾಗಿರಲಿ ,ಈ ವರುಷದ ಜನಾನುರಾಗಿ ಅಮರ ದೀಪಾವಳಿ ! ಭ್ರಮೆತೊಲಗಲಿ - ಕನಸಿನ ದೀಪಾವಳಿಗೆ ಮನದ ಬಯಕೆಗೆ ಮೂಡಣದ ಸೂರ್ಯನ ಬೆಳಕು ,ಚಂದ್ರಮನ ತಂಪಿನ ಬೆಳಕಿನ ದೀಪಾವಳಿ ನಮ್ಮೆಲ್ಲರದಾಗಲೀ ..! ರಚನೆ : ಶ್ರೀಕಾಂತ ಮಳೆಗಲ್ ಬಳ್ಳಾರಿ
----------------------------------
Reg ID: BF25-5811
Please Note - You can vote only Once. If you have already voted - the voting will be disabled automatically by the system.