Submission 3648

ಖುಷಿಯ ಮುಖವಾಡ..!!

Submitted By: ತಮ್ಮಣ್ಣ

----------------------------------

ಕೆಲವೊಮ್ಮೆ ನಾನು ನಗುತ್ತೇನೆ ಮನದಾಳದಿಂದ, ಆ ನಗುವಿನ ಹಿಂದೆ ನೂರು ನೋವು ಮರೆಮಾಡುತ್ತೇನೆ. ಜಗತ್ತಿಗೆ ಖುಷಿಯಾಗಿ ಕಾಣಬೇಕು ಎನ್ನುವ ಹಂಬಲ, ಆದರೆ ಹೃದಯದೊಳಗೆ ಅಲೆಗಳ ಶಬ್ದ ನಿಲ್ಲುವುದೇ ಇಲ್ಲ... ಒಮ್ಮೆ ಖುಷಿ ನನ್ನೊಂದಿಗೆ ಕೈಹಿಡಿದು ನಡೆಯುತ್ತದೆ, ಮತ್ತೊಂದು ಕ್ಷಣದಲ್ಲಿ ಕತ್ತಲೆಯ ಹಾದಿಯಲಿ ನನ್ನನ್ನೆ ಬಿಟ್ಟು ಹೋಗುತ್ತದೆ. ಯಾಕೆ ಅಂತ ಪ್ರಶ್ನೆ ಮಾಡಿದರೆ ಉತ್ತರವೇ ಇಲ್ಲ, ಭಾವನೆಗಳ ದಾರಿ ಅಷ್ಟು ಸರಳವಲ್ಲ... ನಾವು ಕೆಲವೊಮ್ಮೆ ಖುಷಿಯಾಗಿ ಇರ್ತೀವಿ, ಆದರೂ ಕೆಲವೊಮ್ಮೆ ಖುಷಿ ನಮಗಿಲ್ಲ. ಬದುಕು ಅಂದರೆ ಅದೆ — ನಗು ಮತ್ತು ಮೌನದ ಸಂಧಿ, ಒಂದು ಕ್ಷಣ ಹಸಿರು, ಮತ್ತೊಂದು ಕ್ಷಣ ಬೂದು ಬಣ್ಣದ ಸವಿ. ಆದರೂ ನಾವೆಲ್ಲ ಮುಂದುವರಿಯುತ್ತೇವೆ, ನಿನ್ನೆಯ ನೋವಿನ ನೆರಳಲ್ಲಿ ಇಂದಿನ ಬೆಳಕನ್ನು ಹುಡುಕುತ್ತಾ. ಏಕೆಂದರೆ ಖುಷಿಯಿಲ್ಲದ ದಿನಗಳೇ ಕಲಿಸುತ್ತವೆ, ಖುಷಿಯ ಮೌಲ್ಯ ಎಷ್ಟು ಅಮೂಲ್ಯವೆಂದು....!

----------------------------------

Reg ID: BF25-5804

Please Note - You can vote only Once. If you have already voted - the voting will be disabled automatically by the system.

12
Votes
224
Views
10 Months
Since posted

VOTING Closed on Nov 30, 2025!

Scroll to Top