Submission 3622

ಜೀವನದ ಜಂಜಾಟ

Submitted By: ಅನಾಮಿಕ.ಲೇಖಕ

----------------------------------

ಜೀವನ ಎಂತಹ ಜಾಗದಲ್ಲಿ ಕೂರಿಸಿದೆಯೆಂದರೆ, ಮುಂದಕ್ಕೆ ಸಾಗಬೇಕೆಂದರೆ ಭರವಸೆ ಸಾಲುತ್ತಿಲ್ಲ, ಹಿಂದಕ್ಕೆ ಸರಿಯುವ ಧೈರ್ಯವೂ ಇಲ್ಲ. ಕೆಲವೊಮ್ಮೆ ಪರಿಸ್ಥಿತಿಗಳು ಜೀವನವನ್ನೇ ಬದಲಾಯಿಸಿಬಿಡುತ್ತವೆ, ನಾವು ತೆಗೆದುಕೊಂಡ ನಿರ್ಧಾರಗಳು ನಮ್ಮನ್ನು ನೀರಿಲ್ಲದ ಬಾವಿಯೊಳಗಡೆ ತಳ್ಳಿಬಿಡುತ್ತವೆ, ಪರಿಸ್ಥಿತಿಗಳ ಮುಂದೆ ಮಂಡಿಯೂರಿ ಜೀವನದಲ್ಲಿ ನಿಲ್ಲಲು ಶಕ್ತಿ ಇರುವುದಿಲ್ಲ, ತೆಗೆದುಕೊಂಡ ನಿರ್ಧಾರಗಳಿಗೆ ಕೈ ಹಿಡಿದರೆ ಅವು ಕೈ ಹಿಡಿಯಲು ಸಿದ್ಧವಿರುವುದಿಲ್ಲ. ಈ ಪರಿಸ್ಥಿತಿಗಳೇ ಜೀವನವೇ ಅಥವಾ ಜೀವನವೇ ಒಂದು ಪರಿಸ್ಥಿತಿಯೇ? ಈ ನಿರ್ಧಾರಗಳು ಜೀವನವನ್ನು ಬದಲಿಸುತ್ತವೆಯೋ? ಅಥವಾ ಜೀವನವೇ ನಿರ್ಧಾರಗಳನ್ನು ಬದಲಿಸುತ್ತದೆಯೋ?

----------------------------------

Reg ID: BF25-5793

Please Note - You can vote only Once. If you have already voted - the voting will be disabled automatically by the system.

34
Votes
296
Views
6 Months
Since posted

VOTING Closed on Nov 30, 2025!

Scroll to Top