ಕನ್ನಡ ಭಾಷೆಯ ನನ್ನೂರು
Submitted By: MALLIKARJUNA B
----------------------------------
ಕನ್ನಡ ಭಾಷೆಯ ನನ್ನೂರು ಸಂಗೀತ ಸಾಹಿತ್ಯ ಶಿಲ್ಪ ಕಲೆಗಳ ಕಲ್ಪತರು ಯಕ್ಷಗಾನ ಬೂತಕಾಲ ವೀರಗಾಸೆ ನೃತ್ಯಗಳ ನವಿಲೂರು ಅಷ್ಟ ಜ್ಞಾನಪೀಠಗಳ ತವರೂರು ಸುವಾಸನೆಯ ಶ್ರೀಗಂಧ ನನ್ನ ಕಸ್ತೂರಿ ಕನ್ನಡ ಬಾದಾಮಿ ಐಹೊಳೆಗಳ ಸಿರಿಗನ್ನಡ ರನ್ನ ಪಂಪ ಪೊನ್ನರ ಹಳೆಗನ್ನಡ ಜನ್ನ ಹರಿಹರ ರಾಘವಾಂಕರ ನಡುಗನ್ನಡ ಕುವೆಂಪು ಬೇಂದ್ರೆ ಕಾರಂತರ ಹೊಸಗನ್ನಡ ಕಪ್ಪು ಮಣ್ಣಿನ ನನ್ನ ಕರುನಾಡು ಸಹ್ಯಾದ್ರಿ ಪರ್ವತದ ಕಾಡು ಮೇಡು ಬಿಡು ನೀ ಕನ್ನಡದ ಬಗ್ಗೆ ಬಿಗುಮಾನ ಬೆಳಸಿಕೋ ತನು ಮನದಲ್ಲಿ ಕನ್ನಡತನ ಬಸವಣ್ಣ ಅಕ್ಕಮಹಾದೇವಿ ಶಿವಶರಣರ ವಚನ ಕೇಳಲು ಕರ್ಣಗಳಾಗುವುದು ಪಾವನ
----------------------------------
Reg ID: BF25-5776
Please Note - You can vote only Once. If you have already voted - the voting will be disabled automatically by the system.