Submission 3567

Trend ನಡದೈತ್ರೀ ಸಿಕ್ಕಾ..ಪಟ್ಟೆ ಟ್ರೆಂಡ್ ನಡದೈತಿ

Submitted By: Rudragouda S Patil

----------------------------------

ಕಾಲೇಜಿಗೆ ಹೋಗಿ ಸ್ವಲ್ಪ ಹೊತ್ತು ಕೇಳಲಾರದೇ ಪಾಠ ಕೂತು ಓದೋದಂತೂ ದೂರದ ಮಾತು /Trend ನಡದೈತ್ರೀ/ ಕೈಯಾಗೊಂದು ಮೊಬೈಲ್ ಫೋನು ಕಿವ್ಯಾಗೊಂದು ಇಯರ್ ಫೋನು ದಿನಾ ಪೂರ್ತಿ ಆನ್,, ಲೈನು/Trend ನಡದೈತ್ರೀ/ ತಿಂಡಿ ಅಂದರೆ ಮೂಗು ಮುರದು ಊಟಾ ಅಂದ್ರೆ ದೂರ ಸರದು ಅರ್ಧ ಬೆಂದ ಎಗ್ ರೈಸ್ ತಿನ್ನೋದು/Trend ನಡದೈತ್ರೀ/ ಆನ್ ಲೈನ್ ಸೇಲು.. ಬರ್ಜರಿ ಡೀಲು ಕಣ್ಣು ಕುಕ್ಕೋ ಬಗೆಬಗೆ ಮಾಲು ಇದೂ ಬೇಕು ಅದೂ ಬೇಕು ಕೊಳ್ಳುವ ತೆವಲು/Trend ನಡದೈತ್ರೀ/ ಯಾರಿದ್ದ..ರೇನು ಆಜು ಬಾಜು ಹೋದಲೇಲ್ಲಾ ಸೆಲ್ಫೀ ಕ್ರೇಜು ಹುಟ್ಟಿಸುತ್ತೆ ಮನಸಿಗೆ ರೇಜು/Trend ನಡದೈತ್ರೀ/ ಜನರಲ್ ನಾಲೆಜ್ ನಿಲ್ಲೋ ನಿಲ್ಲು ಆಸಕ್ತಿ ಇಲ್ಲ ಯಾವುದರಲ್ಲೂ ತಲೆತುಂಬ ಜಪವೊಂದೇ ಐಪಿ ಎಲ್ಲು/Trend ನಡದೈತ್ರೀ/ ಹಿರಿಯರ ಮಾತು ರುಚಿಸಂಗಿಲ್ಲ ನೀತಿ ನಿಯಮನಡೆಯೋದಿಲ್ಲ ಫೇಸ್ಬುಕ್ ವಾಟ್ಸಪ್ ಇವರಿಗೆ ಎಲ್ಲಾ./Trend ನಡದೈತ್ರೀ/

----------------------------------

Reg ID: BF25-5775

Please Note - You can vote only Once. If you have already voted - the voting will be disabled automatically by the system.

269
Votes
2,455
Views
10 Months
Since posted

VOTING Closed on Nov 30, 2025!

Scroll to Top